- ಮೈಸೂರು ಭಾಗದ ಡಾ. ಬಸವರಾಜು ಜೆಟ್ಟಿಹುಂಡಿ ನೇತೃತ್ವದ ತಂಡದಿಂದ ಅಭಿನಂದನೆ
ಮೈಸೂರು : ಜಯದೇವ ಹೃದ್ರೋಗ ಆಸ್ಪತ್ರೆ ನೂತನ ನಿರ್ದೇಶಕರಾಗಿ ಡಾ.ಬಿ. ದಿನೇಶ್ ಅವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮೈಸೂರು ಭಾಗದ ಡಾ. ಬಸವರಾಜು ಸಿ ಜೆಟ್ಟಿಹುಂಡಿ ನೇತೃತ್ವದ ತಂಡದವರು ಅಭಿನಂದಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ನಿಕಟಪೂರ್ವ ಸಿಂಡಿಕೇಟ್ ಸದಸ್ಯರಾದ ಡಾ. ಬಸವರಾಜು ಸಿ ಜೆಟ್ಟಿಹುಂಡಿ ಮಾತನಾಡಿ ಮೈಸೂರು ಹಿಂದುಳಿದ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ನಮ್ಮ ಭಾಗದ ಸರಳ ಸಜ್ಜನಿಕೆಯ ಜನಸ್ನೇಹಿ ವೈದ್ಯಾಧಿಕಾರಿಗಳಾಗಿ ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಉತ್ತಮ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನೂತನ ನಿರ್ದೇಶಕರಾಗಿ ಡಾ.ದಿನೇಶ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಆಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶಿವಪ್ಪಕೋಟೆ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ವೈ.ಕೆ.ಮಂಜುನಾಥ್, ಜಿಲ್ಲಾ ಕುರುಬರ ಸಂಘದ ನಿರ್ದೇಶಕರಾದ ದಡದಹಳ್ಳಿ ಶಿವರಾಜು, ಕಾರ್ ಮಹದೇವ, ಬೆದ್ದಲಪುರ ನಾಗರಾಜು, ಹರಪನಹಳ್ಳಿ ಚೇತನ್, ವರುಣ ಸ್ವಾಮಿ, ಮಂಡ್ಯ ಸುಮಿತ್, ಭೈರತಿ ಶಶಿ, ಡಾ. ಜ಼ಮೀರ್ ಅಹಮದ್ ಮೊದಲಾದವರು ಉಪಸ್ಥಿತರಿದ್ದರು.