ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ದೇಶಕ್ಕೆ ರಚಿಸಿ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ರವರು ಅಜರಾಮರ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಗಡಿಭಾಗವಾದ ಮೂಲೆಪೆಟ್ಲು ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ದಬ್ದ ಚಿತ್ರಕ್ಕೆ ಸ್ವಾಗತ ಕೋರಿ ಆನಂತರ ನಡೆದ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ೫ ದಿನಗಳ ಕಾಲ ಸಂಚರಿಸಲಿರುವ ಜಾಥಾವನ್ನು ಗೌರವಿತವಾಗಿ ಸ್ವಾಗತ ಮಾಡಿ ಸಂಚಾರದ ಮೂಲ ಉದ್ದೇಶ ವನ್ನು ಅಧಿಕಾರಿ ಗಳು ಮತ್ತು ಚುನಾಯಿತ ಜನ ಪ್ರತಿನಿಧಿಗಳು ತಿಳಿಸಬೇಕು ಎಂದರು.
ಸಮಾನತೆಯಿಂದ ಬದುಕು ನಡೆಸಿ ಸ್ವಾತಂತ್ರ‍್ಯ ದ ಜೀವನ ನಡೆಸಲು ನಮ್ಮ ಸಂವಿಧಾನ ಪ್ರಮುಖ ಕಾರಣವಾಗಿದ್ದು ಅದಕ್ಕೆ ಎಲ್ಲರೂ ಗೌರವ ನೀಡಿ ಆಶಯ ಈಡೇರಿಸಲು ಪ್ರಮಾಣಿಕವಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ತಾ.ಪಂ.ಇಒ ಜಿ.ಕೆ.ಹರೀಶ್, ಜಿಲ್ಲಾ ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ಸಾ.ಮಾ.ಯೋಗೀಶ್ ಮಾತನಾಡಿ ದರು. ಆನಂತರ ಜಾಗೃತಿ ಜಾಥಾ ದೊಡ್ಢೇಕೊಪ್ಪಲು, ಅರಕೆರೆ, ಚೌಕಹಳ್ಳಿ ಮೂಲಕ ಕೆ.ಆರ್.ನಗರ ಪಟ್ಟಣಕ್ಕೆ ಆಗಮಿಸಿದ್ದಾಗ ಭವ್ಯ ಸ್ಬಾಗತ ಕೋರಿದರು.
ಈ ಸಂರ‍್ಭದಲ್ಲಿ ಲಾಳಂದೇವನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಪರ‍್ವತಿಲೋಕೇಶ್, ಮಾಜಿ ಅಧ್ಯಕ್ಷೆ ವಿಮಲಜಯಣ್ಣ, ಜಿ.ಪಂ.ಮಾಜಿ ಸದಸ್ಯರಾದ ಸಿದ್ದಪ್ಪ, ಶಿವರಾಂ, ಪುರಸಭೆಮಾಜಿ ಅಧ್ಯಕ್ಷ ಕೋಳಿಪ್ರಕಾಶ್, ತಾ.ಪಂ. ಮಾಜಿ ಸದಸ್ಯ ಸಣ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಸಿಡಿಪಿಒ ಅಣ್ಣಯ್ಯ, ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ.ಅಶೋಕ್, ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ, ಪಿಡಿಒ ಧನಂಜಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ಬುಡಿಗೌಡ, ಮೂಡಲಕೊಪ್ಪಲು ಕೃಷ್ಣೇಗೌಡ, ಸರಿತಾಜವರಪ್ಪ, ಸುನೀತಾರಮೇಶ್, ಲತಾರವೀಶ್, ಹೊಸಕೋಟೆ ಚೆಲುವರಾಜು, ಚಂದ್ರು, ಚಿಬುಕಹಳ್ಳಿಬಲರಾಮು, ಮತ್ತಿತರರು ಹಾಜರಿದ್ದರು.