ಬೆಂಗಳೂರು: ಡಾ.ಅಂಬೇಡ್ಕರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹತ್ತನೇ ಪದವಿ ದಿನಾಚರಣೆಯು ಜೆಪಿಎನ್ ಆಡಿಟೋರಿಯಂನಲ್ಲಿ ನಡೆಯಲಿದೆ. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಯು.ಆರ್.ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಎಂ.ಶಂಕರನ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ನಿವೃತ್ತ ಐಪಿಎಸ್ ಅಧಿಕಾರಿಗಳಾದ ಎಸ್.ಮರಿಸ್ವಾಮಿ ವಹಿಸಲಿದ್ದಾರೆ. ಸಮಾರಂಭದಲ್ಲಿ ಪಿವಿಪಿ ವೆಲ್ ಫೇರ್ ಟ್ರಸ್ಟಿನ ಕಾರ್ಯದರ್ಶಿ ಎಸ್.ಶಿವಮಲ್ಲು, ಖಜಾಂಚಿ ಡಾ.ಎಂ.ಮಹದೇವ, ವ್ಯವಸ್ಥಾಪಕ ಟ್ರಸ್ಟಿಗಳಾದ ಎ.ಆರ್. ಕೃಷ್ಣಮೂರ್ತಿ, ಡಾ.ಬಿ.ಎನ್.ಉಮೇಶ್, ಸಂಶೋಧನಾ ಸಲಹೆಗಾರ ಪ್ರೋ.ಎಲ್.ಎಂ. ಪಟ್ನಾಯಕ್, ಮಾರ್ಗದರ್ಶಕ ಪ್ರೋ.ಎನ್.ಸಿ.ಶಿವಪ್ರಕಾಶ್, ಪ್ರಾಂಶುಪಾಲ ಡಾ.ಎಂ.ಮೀನಾಕ್ಷಿ, ಪ್ರಾಂಶುಪಾಲ ಡಾ. ಸಿದ್ದರಾಜು, ಡೀನ್‌ಗಳಾದ ಡಾ.ಕೆ.ಎನ್.ಅನುರಾಧ ಮತ್ತು ಡಾ.ಎಸ್.ರಮೇಶ್ ಸೇರಿದಂತೆ ಇತರೆ ಎಲ್ಲಾ ಸದಸ್ಯರು ಉಪಸ್ಥಿತರಿರುತ್ತಾರೆ.
ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಸೇವೆಗಳನ್ನು ಸಲ್ಲಿಸಿರುವ ಗಣ್ಯರು ಭಾಗವಹಿಸುವ ಪದವಿ ದಿನಾಚರಣೆಯ ಸಮಾರಂಭದಲ್ಲಿ ಡಾ.ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ೧೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿರಿಯರ ಸಮ್ಮುಖದಲ್ಲಿ ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಾರೆ. ಕರ್ನಾಟಕದ ಅತ್ಯುತ್ತಮ ತಾಂತ್ರಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಡಾ.ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆಯು ಅತ್ಯುತ್ತಮ ಗುಣಮಟ್ಟ ಮತ್ತು ಶ್ರೇಷ್ಠ ಸಂಶೋಧನಾ ವ್ಯಾಸಂಗಕ್ಕೆ ಹೆಸರಾಗಿದೆ. ವಿಷಯ ಅಧ್ಯಯನ ಮತ್ತು ಸಂಶೋಧನೆಗೆ ಉತ್ತಮವಾದ ವಾತಾವರಣವನ್ನು ಕಲ್ಪಿಸಿ, ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ಬುನಾದಿ ಹಾಕಿಕೊಟ್ಟಿದೆ.
ಈ ಸಾಧನೆಯಿಂದಾಗಿ ಡಾ.ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆಗೆ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಶ್ರೇಷ್ಠ ಶ್ರೇಯಾಂಕ ಕೂಡ ಲಭಿಸಿದೆ. ಹಾಗೆಯೇ ಉತ್ತಮ ಶಿಕ್ಷಣ ಸಂಸ್ಥೆಗೆ ನೀಡುವ ರೇಟಿಂಗ್ ಗ್ರೇಡ್ ಪಡೆಯುವಲ್ಲು ಅತ್ಯಂತ ಯಶಸ್ವಿಯಾಗಿದೆ.