ತುಮಕೂರು : ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲು ಶಿಕ್ಷೆ ತಡೆದಿದ್ದು ಕನ್ನಡಿಗ ಡಾ. ಮೌಲಾ ಷರೀಫ್ ಎಂದು ಸಿದ್ದಗಂಗಾ ಸ್ವಾಮೀಜಿ ಹೇಳಿದ್ದಾರೆ.
ತಮ್ಮ 63 ನೇ ಹುಟ್ಟುಹಬ್ಬದ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ನಡೆದ ಸಭೆಯಲ್ಲಿ ಅವರನ್ನ ಅಭಿನಂದಿಸಿ ಮಾತನಾಡಿದ ಶ್ರೀಗಳು, ಯೆಮನ್ ದೇಶದಲ್ಲಿ ಕೇರಳದ ನರ್ಸ್ ‘ನಿಮಿಷಾ ಪ್ರಿಯಾ’ ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಗಲ್ಲು ಶಿಕ್ಷೆಯನ್ನು ಅಲ್ಲಿನ ಸರ್ಕಾರ ಹಾಗೂ ಸಂತ್ರಸ್ತ ಕುಟುಂಬದವರ ಜೊತೆ ಮಾತನಾಡಿ ಮುಂದೂಡಿದ್ದು ಕರ್ನಾಟಕದ ಡಾ. ಮೌಲಾ ಷರೀಫ್ ಎಂದು ಹೇಳಿದ್ದಾರೆ.
ಯೆಮನ್ ದೇಶದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಿಮಿಷ ಎಂಬ ನರ್ಸ್ ಗಲ್ಲು ಶಿಕ್ಷೆ ರದ್ದುಪಡಿಸಲು ಕೇಂದ್ರ ಸರ್ಕಾರ ಸೇರಿ ಹಲವಾರು ಸಂಘ ಸಂಸ್ಥೆಗಳು ಮನವಿ ಮಾಡಿದ್ದವು. ಗಲ್ಲು ಶಿಕ್ಷೆಯನ್ನು ಅಲ್ಲಿನ ಸರ್ಕಾರ ಹಾಗೂ ಸಂತ್ರಸ್ತ ಕುಟುಂಬದವರ ಜೊತೆ ಮಾತನಾಡಿ ಪ್ರಕರಣವನ್ನು ಕ್ಷಮಿಸುವಂತೆ ಮನವೊಲಿಸಿದ್ದಾರೆ ಎಂದರು.
ಯೆಮೆನ್ ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾಗೆ ಯೆಮೆನ್ ಗಲ್ಲು ಶಿಕ್ಷೆ ರದ್ದುಗೊಳಿಸಿದೆ. ಯೆಮೆನ್ನಲ್ಲಿ ಜೈಲಿನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಕ್ರಿಶ್ಚಿಯನ್ ಧರ್ಮಪ್ರಚಾರಕ ಕೆಎ ಪಾಲ್ ಈ ಬಗ್ಗೆ ಹೇಳಿದ್ದಾರೆ.