ಹುಣಸೂರು : ತಾಲೂಕಿನ ಕಟ್ಟೆಮಳಲವಾಡಿಯ ಹಿರಿಯ ದಲಿತ ಬಿಜೆಪಿ ನಾಯಕ ಹಾಗೂ ಮಾಜಿ ಜಿಪಂ ಸದಸ್ಯ ನಾಗರಾಜ ಮಲ್ಲಾಡಿ ಪುತ್ರಿ ಡಾ.ಪ್ರಫುಲ್ಲಾ ಮಲ್ಲಾಡಿಯವರನ್ನು ರಾಜ್ಯ ಬಿಜೆಪಿ ಮಹಿಳಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಅಧ್ಯಕ್ಷೆ ಸಿ. ಮಂಜುಳಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಾ.ಪ್ರಫುಲ್ಲಾ ಮಾತನಾಡಿ, ಬಿಜೆಪಿ ಪಕ್ಷವು ನನಗೆ ಉತ್ತಮ ಸ್ಥಾನ ಮಾನ ನೀಡಿದ್ದು, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುವೆ ಎಂದಿದ್ದಾರೆ.