Friday, April 4, 2025
Google search engine

Homeರಾಜ್ಯಸುದ್ದಿಜಾಲದ.ರಾ ಬೇಂದ್ರೆಯವರ ಸಾಹಿತ್ಯ ಪ್ರಪಂಚದ ಉತ್ಕೃಷ್ಟ ಸಾಹಿತ್ಯ: ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ

ದ.ರಾ ಬೇಂದ್ರೆಯವರ ಸಾಹಿತ್ಯ ಪ್ರಪಂಚದ ಉತ್ಕೃಷ್ಟ ಸಾಹಿತ್ಯ: ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಜಾತಿ ,ಧರ್ಮ ಪಂಥ, ಬಡವ- ಶ್ರೀಮಂತ ಎಂಬ ಭೇದ ಭಾವವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಮತ್ತು ಸಂಸ್ಕೃತಿ ಮನುಷ್ಯನ ಜೀವನವನ್ನು ಸಾರ್ಥಕ ಗೊಳಿಸಿ ಅರ್ಥ ಪೂರ್ಣಗೊಳಿಸುತ್ತದೆ. ಸಮಾಜದಲ್ಲಿ ಶಾಂತ ಮನಸ್ಸಿನ ನಿರ್ಮಾಣವನ್ನು ಸೃಷ್ಟಿಸಲು ನಿಜವಾದ ಸಾಹಿತ್ಯದ ಅಧ್ಯಯನವನ್ನು ನಡೆಸಬೇಕು . ದ ರಾ ಬೇಂದ್ರೆಯವರ ಸಾಹಿತ್ಯ ಪ್ರಪಂಚದ ಉತ್ಕೃಷ್ಟ ಸಾಹಿತ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವಾರದ ಕವಿ ದ ರಾಬೇಂದ್ರೆ ಕುರಿತು ಮಾತನಾಡುತ್ತಾ ದ.ರಾ ಬೇಂದ್ರೆಯವರ ನಾಕುತಂತಿ ಕೃತಿಗೆ 60 ಸಂವತ್ಸರವಾಗಿದೆ. 1964 ರಲ್ಲಿ ರಚಿತವಾದ ನಾಕುತಂತಿಯ ಕೃತಿಯ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳಲಾಗುವುದು. ದ ರಾ ಬೇಂದ್ರೆಯವರು ಕವಿಗಳು, ನಾಟಕಕಾರರು, ವಿಮರ್ಶಕರು ಚಿಂತಕರು, ದಾರ್ಶನಿಕರು, ರಾಷ್ಟ್ರಭಕ್ತರು ಆಗಿದ್ದವರು. ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದವರು. ಬ್ರಿಟಿಷರ ವಿರುದ್ಧ ಸಾಹಿತ್ಯವನ್ನು ರಚಿಸಿ ಬಂಧನಕ್ಕೆ ಒಳಗಾಗಿದ್ದರು. . ಧಾರವಾಡದ ದ ರಾ ಬೇಂದ್ರೆಯವರ ಮನೆ ಸಾಹಿತ್ಯ ತಪಸ್ಸಿನ ಕೇಂದ್ರವಾಗಿದೆ. ದ ರಾ ಬೇಂದ್ರೆ ಅವರ ಮನೆಗೆ ಭೇಟಿ ನೀಡಿದಾಗ ರಾಷ್ಟ್ರ ಭಕ್ತ ,ಮಹರ್ಷಿ ಅರವಿಂದರ ಅಂತ ಶಕ್ತಿಯ ಸ್ವರೂಪ ಕಂಡುಬರುತ್ತದೆ. ಬೇಂದ್ರೆ ಕನ್ನಡದ ಆಸ್ತಿಯಾಗಿದ್ದು, ಬೇಂದ್ರೆಯವರ ಸಾಹಿತ್ಯದ ಕುರಿತು ವಿಶೇಷ ಚಿಂತನೆ ಅಗತ್ಯವಿದೆ ಎಂದರು. ಸಾಹಿತ್ಯವು ಶಾಂತಿ ನೆಮ್ಮದಿ ,ಉಲ್ಲಾಸ, ಧೈರ್ಯಸ್ಥೈರ್ಯ, ಜನಪದ ಚಿಂತನೆಯನ್ನು ಹುಟ್ಟು ಹಾಕುತ್ತದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವಾರದ ಪ್ರತಿ ಮಂಗಳವಾರ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸರ್ವ ಸಾಹಿತ್ಯ ಅಭಿಮಾನಿಗಳು ಆಗಮಿಸಿ ತಮ್ಮ ಸಾಹಿತ್ಯ ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಆದರ್ಶ ಶಾಲೆಯ ಶಿಕ್ಷಕರಾದ ಶಿವಕುಮಾರ್ ದ ರಾ ಬೇಂದ್ರೆಯವರ ಕವನ ಸಂಕಲನದಕುರಿತು ಮಾತನಾಡಿ ಕುಣಿಯೋಣ ಬಾರ ಕುರಿತು ವಿಶೇಷವಾಗಿ ಮಾತನಾಡಿದರು. ಪ್ರತಿಯೊಬ್ಬರೂ ಸಾಹಿತ್ಯವನ್ನು ಅಪ್ಪಿಕೊಳ್ಳಬೇಕು. ಬೇಂದ್ರೆಯವರ ಸಾಹಿತ್ಯ ವಿಶೇಷವಾದ ಅರ್ಥ ಮತ್ತು ಬರವಣಿಗೆಯ ಸ್ವರೂಪವನ್ನು ಹೊಂದಿದೆ ಎಂದರು.

ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ ಬೇಂದ್ರೆಯವರು ಒಮ್ಮೆ ಚಾಮರಾಜನಗರಕ್ಕೂ ಆಗಮಿಸಿದ್ದರು. ಬೇಂದ್ರೆಯವರ ಸಾಹಿತ್ಯ ರಾಶಿ ವೈಶಿಷ್ಟ್ಯ ಪೂರ್ಣವಾಗಿದೆ .ಅವರ ಅನೇಕ ಕವನಗಳು ಚಿತ್ರಗೀತೆಗಳಾಗಿ ಬಂದಿವೆ. ಮೈಸೂರು ಅನಂತ ಸ್ವಾಮಿಯವರು ಅವರ ಕವನ ಸಂಕಲನಗಳನ್ನು ಹಾಡಿದ್ದಾರೆ. ಬೇಂದ್ರೆ ಕನ್ನಡದ ಆಸ್ತಿಯಾಗಿ ಸದಾಕಾಲ ಉಳಿದಿದ್ದಾರೆ ಎಂದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷರಾದ ಚಾ ರಂ ಶ್ರೀನಿವಾಸ್ ಗೌಡರವರು ಮಾತನಾಡಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ,ಕವಿಗಳು ಮತ್ತು ಚಿಂತಕರ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸುತ್ತಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿದೆ. ಕನ್ನಡ ಸಾಹಿತ್ಯ ಪ್ರಪಂಚದ ಕುವೆಂಪು ಬೇಂದ್ರೆಯವರ ಸಾಹಿತ್ಯ ರಚನೆಗೆ ನೊಬೆಲ್ ಪ್ರಶಸ್ತಿ ಬರಬೇಕಿತ್ತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರ ಪ್ರಸಾದ್, ಸರಸ್ವತಿ, ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ, ಗುರುಲಿಂಗಮ್ಮ, ಗೋವಿಂದರಾಜು, ವಾಸುದೇವ್ , ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular