Thursday, April 24, 2025
Google search engine

Homeರಾಜ್ಯಸುದ್ದಿಜಾಲಕನ್ನಡ ಚಿತ್ರರಂಗ ಹಾಗೂ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟವರು ಡಾ.ರಾಜ್ ಕುಮಾರ್ : ಡಾ. ಕುಮಾರ

ಕನ್ನಡ ಚಿತ್ರರಂಗ ಹಾಗೂ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟವರು ಡಾ.ರಾಜ್ ಕುಮಾರ್ : ಡಾ. ಕುಮಾರ


ಮಂಡ್ಯ:  ನಟಸಾರ್ವಭೌಮ ಡಾ. ರಾಜ್ ಕುಮಾರ್ ಕುರಿತು ಕನ್ನಡಿಗರಿಗೆ ಹೇಳುವ ಅಗತ್ಯವಿಲ್ಲ, ಅವರ ಸರಳತೆ, ಸಜ್ಜನಿಕೆ ವ್ಯಕ್ತಿತ್ವ ಹಾಗೂ ಅವರ ಕೊಡುಗೆ ಕನ್ನಡಿಗರ ಜನಮಾನಸದಲ್ಲಿ ಸದಾಕಾಲ ಚಿರವಾಗಿದೆ. ಕನ್ನಡ ಚಿತ್ರರಂಗ ಹಾಗೂ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟವರು ಡಾ.ರಾಜ್ ಕುಮಾರ್ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.

ಇಂದು (ಏ.24) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಇವರ ಸಂಯುಕ್ತಾಶ್ರಯದಲ್ಲಿ ವರನಟ ಡಾ. ರಾಜ್ ಕುಮಾರ್ ಅವರ 97 ನೇ ಜನ್ಮದಿನಾಚರಣೆಯನ್ನು ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಅವರು ದೈಹಿಕವಾಗಿ ಡಾ. ರಾಜ್ ಕುಮಾರ್ ಅವರು ನಮ್ಮನ್ನು ಆಗಲಿದ್ದರು ಅವರ ಕೊಡುಗೆಗಳು ಆದರ್ಶಗಳು ಮೌಲ್ಯ, ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ಅವರಿಗೆ ಕನ್ನಡದ ಮೇಲೆ ಇದ್ದಂತ ಅಭಿಮಾನ ನಾವ್ಯಾರೂ ಮರೆಯುವಂತಿಲ್ಲ, ಕನ್ನಡನಾಡಿನಲ್ಲಿ ರಾಜ್ ಕುಮಾರ್ ಅಂತಹಾ ವ್ಯಕ್ತಿತ್ವ ಜನಿಸಿದ್ದು ಕನ್ನಡಿಗರ ಭಾಗ್ಯ, ಅವರು ಬಲು ಕಠಿಣದ ಪರಿಸ್ಥಿತಿಯಿಂದ ಬಂದು ಸಾಧನೆ ಮಾಡಿದವರು, ಪ್ರತಿಭೆ ಇದ್ದವರು ಯಾವ ಮಟ್ಟದಲ್ಲಿ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ನಿದರ್ಶನ ಡಾ.ರಾಜ್ ಎಂದು ಹೇಳಿದರು.

ಅವರು ನಟಿಸಿದ ಎಲ್ಲಾ ಚಲನಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ, ಮನೋರಂಜನೆಯ ಜೊತೆ ಮಾನವೀಯ ಮೌಲ್ಯಗಳನ್ನು ತಮ್ಮ ಸಿನಿಮಾಗಳಲ್ಲಿ ಅಳವಡಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ, ಡಾ: ರಾಜ್ ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ಹೊಂದಿದ್ದರು, ಅಂತಹ ಮಹನೀಯರ ಆದರ್ಶಗಳನ್ನು ಮೌಲ್ಯಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮಹಿಳಾ ಸರ್ಕಾರಿ ಕಾಲೇಜಿನ (ಸ್ವಯತ) ಪ್ರಾಂಶುಪಾಲರಾದ ಡಾ. ಗುರುರಾಜ್ ಪ್ರಭು ಅವರು ಮಾತನಾಡಿ ಕನ್ನಡ ನಾಡು ನುಡಿ ಮತ್ತು ಕನ್ನಡ ಚಲನಚಿತ್ರರಂಗದ ಇತಿಹಾಸವನ್ನು ನೋಡಿದರೆ ಡಾ. ರಾಜ್ ಕುಮಾರ್ ಉತ್ತುಂಗ ದಲ್ಲಿ ಕಾಣುತ್ತಾರೆ, ಜಗತ್ತಿನ ದೊಡ್ಡ ದೊಡ್ಡ ದೇಶಗಳಲ್ಲಿ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳು ಸಂಘಗಳನ್ನು ಕಟ್ಟಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ, ಅಮೇರಿಕಾದ ಅಕ್ಕ ಸಮ್ಮೇಳನದಲ್ಲಿ ಡಾ. ರಾಜ್ ಕುಮಾರ್ ಅವರು ಕುರಿತು ವಿಚಾರಗೋಷ್ಠಿಗಳನ್ನು ನಡೆಯುತ್ತಿವೆ ಎಂದು ಹೇಳಿದರು.

ಡಾ.ರಾಜ್ ಕುಮಾರ್ ಕೇವಲ ನಟನಾಗಿ ಅಲ್ಲದ ತಮ್ಮ ಸರಳ ವ್ಯಕ್ತಿತ್ವದಿಂದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು, ತಮ್ಮ ನಟನೆಯ ಮೂಲಕ ನಮ್ಮ ಸಮಾಜ ಮತ್ತು ಸಂಸ್ಕೃತಿಯ ಪ್ರತಿಬಿಂಬಿಸುವ ಕಾರ್ಯ ನಿರ್ವಹಿಸಿದ್ದಾರೆ, ಮುಂದಿನ ಚಿತ್ರರಂಗದ ಪೀಳಿಗೆಗೆ ಮಾದರಿಯಾಗಿ ನಿಲ್ಲುತ್ತಾರೆ ಎಂದು ಹೇಳಿದರು.

ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಇತಿಹಾಸ ಪ್ರಾಧ್ಯಾಪಕ ಕಾಂತರಾಜು ಮಾತನಾಡಿ ರಾಜ್ಯ ಸರ್ಕಾರ ಡಾ. ರಾಜ್ ಕುಮಾರ್ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದು ಪ್ರಶಂಸನೀಯ, , ಡಾಕ್ಟರ್ ರಾಜಕುಮಾರ್ ಯಶಸ್ಸಿನ ಉತ್ತುಂಗದಲ್ಲಿದ್ದರೂ ಸಹ ಸರಳತೆಯ ಸಾರ್ವಭೌಮರಾಗಿದ್ದರು, ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಷ್ಟ್ರಕವಿ ಯುಗದ ಕವಿ ಜಗದ ಕವಿ ಎಂದೇ ಪ್ರಸಿದ್ಧರಾಗಿದ್ದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ರವರೊಂದಿಗೆ ಪಡೆಯುತ್ತಾರೆ ಎಂದು ತಿಳಿಸಿದರು.

ಡಾಕ್ಟರ್ ರಾಜಕುಮಾರ್ ಅಭಿನಯಸದೇ ಇರುವ ಯಾವುದೇ ಪಾತ್ರಗಳಿಲ್ಲ, ಎಲ್ಲಾ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೆ ಮೆರಗು ತುಂಬುತ್ತಿದ್ದರು, ಮಯೂರ, ಇಮ್ಮಡಿ ಪುಲಕೇಶಿ, ಶ್ರೀಕೃಷ್ಣದೇವರಾಯ ಅಂತಹ ಪೌರಾಣಿಕ ಪಾತ್ರಗಳನ್ನು ಬಣ್ಣ ಹಚ್ಚಿ ಜೀವ ತುಂಬಿದವರು ಡಾ. ರಾಜ್, ಕನ್ನಡ ನಾಡು ನುಡಿ ವಿಚಾರದಲ್ಲಿ ಡಾ.ರಾಜ್ ಕುಮಾರ್ ಅವರ ಗಟ್ಟಿತನದ ನಿಲುವು ಗೋಕಾಕ್ ಚಳುವಳಿಗೆ ಶಕ್ತಿಯನ್ನು ತುಂಬಿತ್ತು, ಗೋಕಾಕ್ ಚಳುವಳಿಯಲ್ಲಿ ಲಕ್ಷೋಪಲಕ್ಷ ಮಂದಿ ಸೇರಿಸಿ ಚಳುವಳಿಯನ್ನು ಯಶಸ್ವಿಗೊಳಿಸಿದರು ಎಂದು ಹೇಳಿದರು.

ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಸಂದೇಶ ಅವರು ಮಾತನಾಡಿ ತಮ್ಮ ಉದ್ಯೋಗವನ್ನು ಶ್ರದ್ಧೆಯಿಂದ ಪ್ರೀತಿಸಿ ಕೆಲಸ ಮಾಡುವವರು ಉನ್ನತ ಸ್ಥಾನ ನ ಅಲಂಕರಿಸಬಹುದು ಎಂಬುದಕ್ಕೆ ನೈಜ ಉದಾಹರಣೆ ಡಾ. ರಾಜಕುಮಾರ್, ತಮ್ಮ ಎಲ್ಲಾ ಪಾತ್ರಗಳಲ್ಲೂ ಸಹ ತಮ್ಮ ಕಾಯಕ ನಿಷ್ಠೆಯನ್ನು ತೋರಿಸಿದ್ದಾರೆ, ಭಿಕ್ಷುಕನಿಂದ ಇಡಿದು ಬಾಂಡ್ ಶೈಲಿಯ ಪಾತ್ರಗಳನ್ನು ಡಾ.ರಾಜ್ ಕುಮಾರ್ ನಿರ್ವಹಿಸಿದ್ದಾರೆ ಎಂದು ಹೇಳಿದರು.

 ಹೆಣ್ಣು ಮಕ್ಕಳು ಸರ್ಕಾರಿ ನೌಕರಿ ಹೊಂದಿರುವ ಗಂಡನ್ನು ಹುಡುಕುವ ಬದಲು ನೀವೇ ಸರ್ಕಾರಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅರಿವು ಬೋಧಿ ಫೌಂಡೇಶನ್ ಅಧ್ಯಕ್ಷರಾದ ಗಣೇಶ್ ಅವರು ಮಾತನಾಡಿ ಹಿಂದಿನ ಕಾಲದಲ್ಲಿ ಹೆಚ್ಚಿನ ಅನಕ್ಷರಸ್ಥರು ಇದ್ದು ಅವರಿಗೆ ಪೌರಾಣಿಕ ಇತಿಹಾಸವನ್ನು ಓದಿ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ, ಅಂತಹ ಸಮಯದಲ್ಲಿ ದೃಶ್ಯ ಮಾಧ್ಯಮಗಳು ಹಾಗೂ ಚಲನಚಿತ್ರಗಳು ಜನರಿಗೆ ಪೌರಾಣಿಕ ಇತಿಹಾಸ ಕುರಿತು ಮಾಹಿತಿ ನೀಡುತ್ತಿತ್ತು, ಡಾ. ರಾಜಕುಮಾರ್ ಅಭಿನಯಿಸಿದ ಎಷ್ಟೋ ಪೌರಾಣಿಕ ಪಾತ್ರಗಳು ಜನರಿಗೆ ಇತಿಹಾಸದ ಕುರಿತು ಮಾಹಿತಿಯನ್ನು ತಿಳಿಸಿದವು, ಅವರು ಅಭಿನಯಿಸಿದ ಎಷ್ಟೋ ಚಲನಚಿತ್ರಗಳಿಂದ ಜನರು ಪ್ರೇರೇಪಿತರಾಗಿ ಚಲನಚಿತ್ರಗಳಲ್ಲಿ ನೀಡಿದ ನೈತಿಕ ಸಂದೇಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಲು ಮುಂದಾದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿಶ್ಚಯ್ ಜೈನ್, ಮನ್ಸೂರ್ ಪಾಷಾ, ಹಾಗೂ ಕೃಷ್ಣೇಗೌಡ ಅವರು ಡಾ. ರಾಜಕುಮಾರ್ ಅಭಿನಯಿಸಿದ ಚಲನಚಿತ್ರ ಗೀತೆಗಳಾದ ಜೇನಿನ ಹೊಳೆಯೋ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಆಡಿಸಿ ನೋಡು ಬೀಳಿಸಿ ನೋಡು ಹುರುಳಿ ಹೋಗದು ಹಾಗೂ ಎಲ್ಲಾದರೂ ಇರು ಎಂತಾದರು ಇರು ಎಂದೆAದಿಗೂ ನೀ ಕನ್ನಡವಾಗಿರು ಎಂಬ ಗೀತೆಗಳನ್ನು ಪ್ರಸ್ತುತಪಡಿಸಿದರು,

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್ ನಿರ್ಮಲ, ಮಹಿಳಾ ಸರ್ಕಾರಿ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಶಿವರಾಜ್, ಮಹಿಳಾ ಸರ್ಕಾರಿ ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ನಿಂಗರಾಜು, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರವೀಂದ್ರ, ನಗರಸಭೆ ಮಾಜಿ ಸದಸ್ಯರಾದ ಆನಂದ್, ಅನನ್ಯ ಆರ್ಟ್ನ ಅನುಪಮಾ ಬಿ.ಎಸ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular