Friday, April 4, 2025
Google search engine

Homeರಾಜ್ಯಸುದ್ದಿಜಾಲಜಗತ್ತಿನ ಎಲ್ಲಾ ಸಾಧು ಸಂತರಿಗೆ ಡಾ.ಶಿವಕುಮಾರ ಶ್ರೀಗಳು ಮಾದರಿ ಮತ್ತು ಮೇರು ಪರ್ವತ -ಶಾಸಕ ಡಿ.ರವಿಶಂಕರ್

ಜಗತ್ತಿನ ಎಲ್ಲಾ ಸಾಧು ಸಂತರಿಗೆ ಡಾ.ಶಿವಕುಮಾರ ಶ್ರೀಗಳು ಮಾದರಿ ಮತ್ತು ಮೇರು ಪರ್ವತ -ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಅಕ್ಷರ ಮತ್ತು ಅನ್ನದಾಸೋಹದ ಮೂಲಕ ಕ್ರಾಂತಿ ಮಾಡಿ ಕೋಟ್ಯಾಂತರ ವಿದ್ಯಾರ್ಥಿಗಳ ಪಾಲಿನ ದೇವರಾಗಿರುವ ಸಿದ್ದಗಂಗಾ ಮಠದ ಶತಾಯುಷಿ ಡಾ.ಶಿವಕುಮಾರ ಶ್ರೀಗಳು ದೈವಾಂತ ಸಂಭೂತರು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಬಸವೇಶ್ವರ ಬಡಾವಣೆಯ ಬಳೆ ಬಸವರಾಜಪ್ಪ ಧರ್ಮಛತ್ರದಲ್ಲಿ ಖಾದಿ ಭಂಡಾರ್ ಸ್ನೇಹ ಬಳಗದ ವತಿಯಿಂದ ನಡೆದ ಶಿವಕುಮಾರ ಮಹಾಸ್ವಾಮಿಗಳ ೫ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಗತ್ತಿನ ಎಲ್ಲಾ ಸಾಧು ಸಂತರಿಗೆ ಮಾದರಿ ಮತ್ತು ಮೇರು ಪರ್ವತವಾಗಿರುವ ಶ್ರೀಗಳು ನಮ್ಮ ನಾಡಿನಲ್ಲಿ ಜನಿಸಿದ್ದು ಎಲ್ಲರ ಪುಣ್ಯ ವಿಶೇಷ ಎಂದರು.

ಸಿದ್ದಗಂಗಾ ಮಠದಲ್ಲಿ ಕಲಿಯುವ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಲಿದ್ದು ಅಲ್ಲಿ ವ್ಯಾಸಂಗ ಮಾಡಿದವರು ಉತ್ತಮ ಬದುಕು ರೂಪಿಸಿಕೊಂಡು ಸಮಾಜಕ್ಕೆ ದಾರಿದೀಪವಾಗಲಿದ್ದು ಅದು ಸರ್ವ ಜನಾಂಗ ಶಾಂತಿಯ ತೋಟ ಎಂದು ಬಣ್ಣಿಸಿದರು.
ಪುಣ್ಯ ಸ್ಮರಣೆ ಕಾರ್ಯಗಳು ಮತ್ತು ತ್ರಿವಿಧ ದಾಸೋಹಿಯ ಕಾಯಕಗಳನ್ನು ಜಗತ್ತಿಗೆ ತಿಳಿಸುವ ಕೆಲಸವನ್ನು ಎಲ್ಲರೂ ನಿರಂತರವಾಗಿ ಮಾಡುವ ಮೂಲಕ ನಾವೆಲ್ಲ್ಲಾ ಅವರಿಗೆ ಗೌರವ ಸಲ್ಲಿಸಿ ಕಾಯಕ ಯೋಗಿಯ ಜೀವನ ಮತ್ತು ಸಾಧನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕರ್ಪೂರವಳ್ಳಿ ಮಠದ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ, ಅರಕೆರೆ ವಿರಕ್ತ ಮಠದ ಸಿದ್ದೇಶ್ವರಶ್ರೀಗಳು, ಕಲ್ಯಾಣಪುರ ಮಠದ ಮಾತೆ ಚಿನ್ಮಯಿತಾಯಿ ಆಶೀರ್ವಚನ ನೀಡಿದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯರಾದ ರಾಜಯ್ಯ, ಸಿದ್ದಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್‌ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೆಂಪರಾಜು, ಪುರಸಭೆ ಮಾಜಿ ಉಪಾಧ್ಯಕ್ಷೆ ಕೆ.ಎಂ.ನಾಗರತ್ನಮ್ಮ ಮಾತನಾಡಿದರು.

ಖಾದಿ ಭಂಡಾರ್ ಸ್ನೇಹ ಬಳಗದ ಪದಾಧಿಕಾರಿಗಳಾದ ಅರ್ಜುನಹಳ್ಳಿಜ್ಞಾನಾನಂದ, ಬಿ.ಎಂ.ನಾಗರಾಜು, ಪೆರಿಸ್ವಾಮಿ, ಸುಬ್ಬುಕೃಷ್ಣ, ಹೆಚ್.ಸಿ.ಮಹದೇವಪ್ಪ, ಬಿ.ಎಂ.ಪ್ರಕಾಶ್, ದೇವರಾಜು, ಮೋಹನ್‌ಕುಮಾರ್, ಹೆಗ್ಗಂದೂರುಪ್ರಭಾಕರ್, ಎಲ್.ಎಸ್.ಮಹೇಶ್, ಎ.ಟಿ.ಶಿವಣ್ಣ, ಮುಸ್ಲಿಂ ಮುಖಂಡ ಇಕ್ಬಾಲ್‌ಪಾಷ, ಅರ್ಜುನಹಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಎಸ್.ದಿಲೀಪ್, ಟಿಎಪಿಸಿಎಂಎಸ್ ನಿರ್ದೇಶಕ ತೋಟಪ್ಪನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಆರ್.ಕಾಂತರಾಜು ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular