ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಹೋಗುತ್ತಿರುವುದು ಇದೇ ಮೊದಲು. ಮೇ 18ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳಕ್ಕೆ ಆಗಮಿಸಲಿದ್ದು, ಬಳಿಕ ಕೊಟ್ಟಾಯಂ ಜಿಲ್ಲೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮೇ 19ರಂದು ಬೆಳಗ್ಗೆ ಶಬರಿಮಲೆಯ ಬಳಿಯಿರುವ ನೀಲಕ್ಕಲ್ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದು, ಬಳಿಕ ಪಂಪಾ ಬೇಸ್ ಕ್ಯಾಂಪ್‌ಗೆ ತೆರಳಿದ್ದಾರೆ. ಪಂಪಾ ಬೇಸ್ ಕ್ಯಾಂಪ್‌ನಿಂದ ದೇವಾಲಯಕ್ಕೆ ತೆರಳುವ ಪ್ರಯಾಣ ವಿಧಾನದ ಕುರಿತು ಅಂತಿಮ ನಿರ್ಧಾರವನ್ನು ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿರುವ ವಿಶೇಷ ರಕ್ಷಣಾ ಗುಂಪು (SPG) ತೆಗೆದುಕೊಳ್ಳಲಿದೆ.
ಈ ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಶಬರಿಮಲೆ ಏರುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಭದ್ರತಾ ಇಲಾಖೆಯು ಅವರು ನೇರವಾಗಿ ಇಳಿಯಲು ಸನ್ನಿಧಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಯೋಜಿಸಿತ್ತು. ಆದರೆ ವಿರೋಧದಿಂದಾಗಿ ಆ ಆಲೋಚನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.