ಮಂಡ್ಯ:ಕೆ.ಆರ್.ಎಸ್ ಡ್ಯಾಂ ಭರ್ತಿಯಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಉತ್ತರ ಕಾವೇರಿ ಸೇತುವೆ ಮೇಲೆ ಕಾವೇರಿ ನದಿಗೆ ದೃಷ್ಟಿ ತೆಗೆದು ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪೂಜೆ ಸಲ್ಲಿಸಿದರು.
ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಬೂದುಗುಂಬಳಕಾಯಿ ,ಸೌತೆಕಾಯಿ ಹಾಗು ತೆಂಗಿನಕಾಯಿಯಲ್ಲಿ ನದಿಗೆ ದೃಷ್ಟಿ ತೆಗೆದು ದೃಷ್ಟಿ ಪೂಜೆ ನೆರವೇರಿಸಲಾಯಿತು.

ನಮ್ಮ ಕಾವೇರಿ ನದಿಯ ಮೇಲೆ ಯಾರದೇ ಕೆಟ್ಟ ದೃಷ್ಟಿ ತಾಗದಿರಲೆಂದು ಇಳಿ ತೆಗೆದ ಪದಾಧಿಕಾರಿಗಳು ಪೂಜೆ ಬಳಿಕ ಜನರಿಗೆ ಸಿಹಿ ಹಂಚಿ ಕಾವೇರಿ ಒಡಲು ತುಂಬಿದ್ದಕ್ಕೆ ಸಂಭ್ರಮಾಚರಣೆ ಮಾಡಿದರು.