ನವದೆಹಲಿ: ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಡ್ರೋನ್ ಹಾರಾಟವಾಗಿರುವ ಕುರಿತು ವರದಿಯಾಗಿದ್ದು, ತನಿಖೆ ಚುರುಕುಗೊಂಡಿದೆ.
ಎಸ್ ಪಿಜಿ ಸಿಬ್ಬಂದಿಗೆ ಬೆಳಗಿನ ಜಾವ 5.30ರ ಸುಮಾರಿಗೆ ಡ್ರೋನ್ ಕಾಣಿಸಿದೆ.
ದೆಹಲಿ ಪೊಲೀಸರು ಡ್ರೋನ್ ಅನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಡ್ರೋನ್ ಪತ್ತೆಯಾಗಿಲ್ಲ. ಪಿಎಂ ಮೋದಿ ಅವರ ನಿವಾಸವು ರೆಡ್ ನೋ ಫ್ಲೈ ಝೋನ್ ಅಥವಾ ಡ್ರೋನ್ ಝೋನ್ ಅಡಿಯಲ್ಲಿ ಬರುತ್ತದೆ.