ಮಂಡ್ಯ: ಸಕ್ಕರೆನಾಡಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಜನರು ಗುಳೇ ಹೊರಡಲು ಸಿದ್ದರಾಗಿದ್ದಾರೆ.
ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಡ್ಯಾಂ ನಲ್ಲೂ ನೀರಿನ ಕೊರತೆ ಉಂಟಾಗಿದ್ದು, ಬಿಸಿಲ ಬೇಗೆಗೆ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು,ಕಟ್ಟೆಗಳು ಕಾಲುವೆಗಳು ಬತ್ತಿಹೋಗಿವೆ.

ನೀರಿಲ್ಲದೆ ರೈತರ ಬೆಳೆ ಒಣಗಿದೆ. ಕುಡಿಯುವ ನೀರಿಗಾಗಿ ಜಾನುವಾರುಗಳ ಪರದಾಡುತ್ತಿವೆ.
ಜಿಲ್ಲೆಯ ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲದೆ ಜನರು ತತ್ತರಿಸಿದ್ದಾರೆ.
ಬರಗಾಲದಿಂದ ಕಂಗಾಲಾಗಿರುವ ಜಿಲ್ಲೆಯ ಜನರು ಗುಳೇ ಹೊರಡಲು ಸಿದ್ದರಾಗಿದ್ದಾರೆ.
