ಪಿರಿಯಾಪಟ್ಟಣ: ಕೇಂದ್ರದ ಮಾಜಿ ಸಚಿವರು ಹಾಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಮುಖಂಡರ ಬರ ಪ್ರವಾಸ ಅಧ್ಯಯನ ತಂಡ ನ. 7 ರಂದು ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ ಭೇಟಿ ನೀಡಲಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ ತಿಳಿಸಿದ್ದಾರೆ.
ಸಂಸದರಾದ ಪ್ರತಾಪ್ ಸಿಂಹ, ಮಾಜಿ ಸಂಸದರಾದ ಸಿ.ಎಚ್ ವಿಜಯ್ ಶಂಕರ್, ಮಾಜಿ ಸಚಿವರಾದ ಎನ್.ಮಹೇಶ್, ಶಾಸಕರಾದ ಶ್ರೀವತ್ಸ ಮಾಜಿ ಶಾಸಕರಾದ ಹರ್ಷವರ್ಧನ್, ನಿರಂಜನ್ ಕುಮಾರ್ ಅವರನ್ನು ಒಳಗೊಂಡ ತಂಡ ಅಂದು ಮಧ್ಯಾಹ್ನ 12.30 ಗಂಟೆಗೆ ರಾವಂದೂರು ಹೋಬಳಿಯ ಮಾಕೋಡು ಬೋರೆ ಮತ್ತು ಎಸ್.ಕೊಪ್ಪಲು ಗ್ರಾಮದ ರೈತರ ಜಮೀನಿಗೆ ಭೇಟಿ ಹಾಗೂ ಅಲ್ಪನಾಯಕನಹಳ್ಳಿಯಲ್ಲಿ ಆತ್ಮಹತ್ಯೆಗೊಳಗಾದ ರೈತನ ಮನೆಗೆ ಭೇಟಿ ನೀಡಿ ಬಳಿಕ ಬೆಟ್ಟದಪುರದ ಶ್ರೀ ಚಿಕ್ಕವೀರದೇಶಿಕೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಭೋಜನ ಸ್ವೀಕರಿಸಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಈ ವೇಳೆ ತಾಲೂಕಿನ ಬಿಜೆಪಿ ಪಕ್ಷದ ವಿವಿಧ ಮೋರ್ಚಾ ಪದಾಧಿಕಾರಿಗಳು ಜನಪ್ರತಿನಿಧಿಗಳು ಸ್ಥಳೀಯ ಮುಖಂಡರು ಹಾಜರಿರುವಂತೆ ಕೋರಿದ್ದಾರೆ.
