ಪಿರಿಯಾಪಟ್ಟಣ:ಪಿರಿಯಾಪಟ್ಟಣ ತಾಲ್ಲೂಕಿನ ವಿವಿಧೆಡೆ ಕೇಂದ್ರದ ಮಾಜಿ ಸಚಿವ ಹಾಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ ಪಕ್ಷದ ಮುಖಂಡರ ಬರ ಪ್ರವಾಸ ಅಧ್ಯಯನ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ಸಂಸದರಾದ ಪ್ರತಾಪ್ ಸಿಂಹ, ಮಾಜಿ ಸಂಸದರಾದ ಸಿ.ಎಚ್ ವಿಜಯ್ ಶಂಕರ್, ಮಾಜಿ ಸಚಿವರಾದ ಎನ್.ಮಹೇಶ್, ಶಾಸಕರಾದ ಶ್ರೀವತ್ಸ ಮಾಜಿ ಶಾಸಕರಾದ ನಿರಂಜನ್ ಕುಮಾರ್ ಅವರನ್ನು ಒಳಗೊಂಡ ತಂಡ ದೊಡ್ಡಬೆಲಾಳು ಗ್ರಾಮದ ರೈತ ಸಣ್ಣತಮ್ಮೇಗೌಡರ ಮೆಕ್ಕೆಜೋಳದ ಜಮೀನು ಮಾಕೋಡು ಬೋರೆಯ ದೊಡ್ಡಸೋಮೇಗೌಡ ಹಾಗೂ ರಾಜೇಗೌಡರ ಶುಂಠಿ ಜಮೀನು ಆರ್.ಡಿ ಕೊಪ್ಪಲು ಗ್ರಾಮದ ರೈತ ಬಸವಣ್ಣ ಅವರ ರಾಗಿ ಜಮೀನುಗಳಿಗೆ ಭೇಟಿ ನೀಡಿ ಬರದಿಂದ ರೈತರಿಗೆ ಉಂಟಾಗಿರುವ ನಷ್ಟದ ಬಗ್ಗೆ ಮಾಹಿತಿ ಪಡೆದರು. ಬಳಿಕ ಅಲ್ಪನಾಯಕನಹಳ್ಳಿ ಗ್ರಾಮದಲ್ಲಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್ ರವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಪಕ್ಷದ ವತಿಯಿಂದ 25 ಸಾವಿರ ಹಾಗೂ ಬಸನಗೌಡ ಪಾಟೀಲ್ ರವರು ವೈಯಕ್ತಿಕವಾಗಿ 25 ಸಾವಿರ ಸೇರಿ ಒಟ್ಟು 60 ಸಾವಿರ ನೀಡಿದರು.

ಈ ಸಂದರ್ಭ ಸಂಸದರಾದ ಪ್ರತಾಪ್ ಸಿಂಹ, ಮಾಜಿ ಸಂಸದರಾದ ಸಿ.ಎಚ್ ವಿಜಯ್ ಶಂಕರ್, ಮಾಜಿ ಸಚಿವರಾದ ಎನ್.ಮಹೇಶ್, ಶಾಸಕರಾದ ಶ್ರೀವತ್ಸ ಮಾಜಿ ಶಾಸಕರಾದ ನಿರಂಜನ್ ಕುಮಾರ್, ರೈತ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್, ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ತಾಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ, ಪ್ರಧಾನ ಕಾರ್ಯದರ್ಶಿ ಬೆಮ್ಮತ್ತಿ ಚಂದ್ರು, ರೈತ ಮೋರ್ಚ ಜಿಲ್ಲಾಧ್ಯಕ್ಷ ರಮೇಶ್ ಕುಮಾರ್, ತಾಲೂಕು ಅಧ್ಯಕ್ಷ ಬೆಕ್ಕರೆ ಮಹದೇವ್, ತಂಬಾಕು ಮಂಡಳಿ ನಿರ್ದೇಶಕ ವಿಕ್ರಂರಾಜು, ರಾವಂದೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕೆಲ್ಲೂರು ಅಶೋಕ್, ಮುಖಂಡರಾದ ವಸಂತ್ ಕುಮಾರ್, ಆರ್.ಟಿ ಸತೀಶ್, ಪಿ.ಜೆ ರವಿ, ಕೊಪ್ಪ ರಾಜೇಂದ್ರ, ಕೌಲನಹಳ್ಳಿ ಸೋಮಶೇಖರ್, ನಳಿನಿ, ಗೀತಾ, ವಕೀಲ ಲೋಕೆಶ್, ಲೋಕಪಾಲಯ್ಯ, ಹರಳಹಳ್ಳಿ ಅಭಿ ಆರಾಧ್ಯ, ನಾಗೇಶ್, ಮೈಲಾರಿ, ಅರುಣ್ ರಾಜೆಅರಸ್, ಸುಂದರ್, ರಮೇಶ್ ಹಾಗೂ ತಾಲೂಕಿನ ಬಿಜೆಪಿ ಪಕ್ಷದ ವಿವಿಧ ಮೋರ್ಚಾ ಪದಾಧಿಕಾರಿಗಳು ಜನಪ್ರತಿನಿಧಿಗಳು ಸ್ಥಳೀಯ ಮುಖಂಡರು ಹಾಜರಿದ್ದರು.