Monday, December 29, 2025
Google search engine

Homeಅಪರಾಧದಾವಣಗೆರೆಯಲ್ಲಿ ಡ್ರಗ್ಸ್ ದಂಧೆ ಕಾಂಗ್ರೆಸ್ ಸಚಿವರ ಆಪ್ತರು ಅಂದರ್

ದಾವಣಗೆರೆಯಲ್ಲಿ ಡ್ರಗ್ಸ್ ದಂಧೆ ಕಾಂಗ್ರೆಸ್ ಸಚಿವರ ಆಪ್ತರು ಅಂದರ್

ದಾವಣಗೆರೆ: ಬೆಂಗಳೂರಲ್ಲಿ ಮಾದಕ ವಸ್ತು ತಯಾರಿಕ ಘಟಕದ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ ಬೆನ್ನಲ್ಲೇ ದಾವಣಗೆರೆಯಲ್ಲಿ ಡ್ರಗ್ಸ್ ದಂಧೆಯಲ್ಲಿ ಕಾಂಗ್ರೆಸ್ ಸಚಿವರ ಆಪ್ತರು ಅಂದರ್ ಆಗಿದ್ದಾರೆ.

ಡ್ರಗ್ಸ್ ದಂಧೆ ನಡೆಸುತ್ತಿದ್ದ ಗ್ಯಾಂಗ್ ಮೇಲೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಇತ್ತೀಚೆಗೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಆಪ್ತ ವೇದಮೂರ್ತಿ ಸೇರಿ ನಾಲ್ವರು ಬಂಧನವಾಗಿತ್ತು. ಬಂಧಿತರಿಂದ 290 ಗ್ರಾಂ ಎಂಡಿಎಂಎ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್‌ ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಅದೇ ಪ್ರಕರಣದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಆಪ್ತ ಅನ್ವರ್ ಬಾಷಾ ಸೇರಿ ಪಾರಸ್, ಕೃಷ್ಣಮೂರ್ತಿ, ಧೋನಿ ಅಲಿಯಾಸ್ ಮಂಜುನಾಥ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮಾದಕ ಮಾರ್ಜಾಲ ಸಚಿವರ ಆಪ್ತರಿಂದಲೇ ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ಭಾರೀ ಮುಜುಗರ ಉಂಟಾಗಿದೆ.

ಪ್ರಕರಣವನ್ನು ಬಯಲಿಗೆಳೆದ ಲೇಡಿ ಸಿಂಗಂ ಎಸ್‌ಪಿ ಉಮಾ ಪ್ರಶಾಂತ್ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬೈರತಿ ಸುರೇಶ್ ಸಚಿವರುಗಳ ಜೊತೆ ಫೋಟೋ ಇದ್ದರೆ ಅವರು ಆಪ್ತರಾಗುತ್ತಾರಾ? ನಾನು ಕೂಡ ಸಾಕಷ್ಟು ಕಾರ್ಯಕ್ರಮಗಳಿಗೆ ಹೋಗುತ್ತೇವೆ. ಆಗ ನಮ್ಮ ಜೊತೆ ಸಾಕಷ್ಟು ಜನರು ಫೋಟೋ ತೆಗೆಸಿಕೊಳ್ಳುತ್ತಾರೆ. ಹಾಗಾದ್ರೆ ಅವರು ನಮ್ಮ ಆಪ್ತರಾಗುತ್ತಾರಾ ಎಂದು ಪ್ರಶ್ನಿಸಿ, ಸಚಿವರುಗಳ ಪರ ಬ್ಯಾಟಿಂಗ್ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular