Sunday, April 20, 2025
Google search engine

Homeಅಪರಾಧಮದ್ಯದ ನಶೆಯಲ್ಲಿ ಮಗನ ಬಾಯಿಗೆ ಪೇಪರ್​ ತುರುಕಿ ಕೊಲೆ ಮಾಡಿದ ತಂದೆ: ಆರೋಪಿ ಬಂಧನ

ಮದ್ಯದ ನಶೆಯಲ್ಲಿ ಮಗನ ಬಾಯಿಗೆ ಪೇಪರ್​ ತುರುಕಿ ಕೊಲೆ ಮಾಡಿದ ತಂದೆ: ಆರೋಪಿ ಬಂಧನ

ಮಹಾರಾಷ್ಟ್ರ: ವ್ಯಕ್ತಿಯೊಬ್ಬ ಮದ್ಯದ ನಶೆಯಲ್ಲಿ ಮಗನ ಬಾಯಿಗೆ ಪೇಪರ್​ ತುರುಕಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಕಾಸರ ಪ್ರದೇಶದ ವಾಶಾಲಾದಲ್ಲಿ ನಡೆದಿದ್ದು,  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕೃತ್ಯ ನಡೆಯುವಾಗ ವ್ಯಕ್ತಿ ತುಂಬಾ ಕುಡಿದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ, ಅಪರಾಧದ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು.

ಕೌಟುಂಬಿಕ ಕಲಹಗಳ ಹಿನ್ನೆಲೆಯಲ್ಲಿ ವ್ಯಕ್ತಿ ಮತ್ತು ಆತನ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಬಾಲಕ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ತಾಯಿ ಮನೆಯಿಂದ ಬಾಲಕ ನಾಪತ್ತೆಯಾಗಿದ್ದು, ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಅಪ್ರಾಪ್ತ ಬಾಲಕ ತನ್ನ ತಂದೆಯ ಮನೆಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ಚರಿಕೆ ನೀಡಿದ ನಂತರ, ಪೊಲೀಸರು ಸ್ಥಳಕ್ಕೆ ಹೋದರು ಆಗ ಬಾಲಕನ ಬಾಯಲ್ಲಿ ಕಾಗದದ ಚೆಂಡು ಇರುವುದು ಜತೆಗೆ ಮೂಗನಲ್ಲಿ ರಕ್ತಸ್ರಾವವಾಗಿರುವುದನ್ನು ಗಮನಿಸಿದ್ದಾರೆ. ತನ್ನ ಪತ್ನಿ ಪ್ರತ್ಯೇಕವಾಗಿ ಉಳಿದುಕೊಳ್ಳಲು ಶುರುಮಾಡಿದ ಬಳಿಕ ಹೆಚ್ಚಾಗಿ ಮದ್ಯಪಾನ ಮಾಡುತ್ತಿದ್ದ.

ಹಾಗೆಯೇ ಮಂಗಳವಾರ ಮಧ್ಯರಾತ್ರಿ ಕುಡಿದ ಅಮಲಿನಲ್ಲಿ ನೋಟ್ ​ಬುಕ್ ​ನ ಹಾಳೆಗಳನ್ನು ಹರಿದು ಉಂಡೆಯ ರೀತಿ ಮಾಡಿ ಮಗನ ಬಾಯಿಗೆ ತುರುಕಿ ಹತ್ಯೆ ಮಾಡಿದ್ದಾನೆ.

ಮೃತ ಬಾಲಕನ ಸಂಬಂಧಿಯೊಬ್ಬರು ನೀಡಿದ ದೂರಿನ ಮೇರೆಗೆ ಮಂಗಳವಾರ ರಾತ್ರಿ ಆರೋಪಿಯನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular