ಬೆಂಗಳೂರು: ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ದಸರಾ ಸಂಭ್ರಮ, ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ ದಸರಾ ಗೊಂಬೆ, ಈ ಭಾರಿ ಮಾತ್ರ ಏರ್ಪೋರ್ಟ್‌ನಲ್ಲಿ ಪ್ರಯಾಣಿಕರ ಜೊತೆಗೆ ಹೊಸ ಲೋಕದ ಜೊತೆಗೆ ಹಬ್ಬದ ವಾತಾವರಣೆವೇ ನಿರ್ಮಾಣವಾಗಿದ್ದು, ಪ್ರಯಾಣಿಕರು ಪುಲ್ ಖುಷಿಯಾಗಿದ್ದಾರೆ.

ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಏರ್ಪೋರ್ಟ್‌ನಲ್ಲಿ ನಿತ್ಯ ಕೆಲಸದಲ್ಲೆ ಬ್ಯುಸಿಯಾಗಿರುವ ಸಿಬ್ಬಂದಿಗೂ ಸಹ ಏರ್ಪೋಟ್ ಆಡಳಿತ ಮಂಡಳಿ ರಂಗೋಲಿ ಸ್ವರ್ಧೆಯನ್ನ ಆಯೋಜಿಸಿದ್ದು, ಮಹಿಳಾ ಮತ್ತು ಪುರುಷ ಸಿಬ್ಬಂದಿ ಟರ್ಮಿನಲ್‌ನಲ್ಲಿ ವಿವಿಧ ಬಗೆಯ ರಂಗೋಲಿ ಹಾಗೂ ಚಿತ್ರಗಳನ್ನ ಬಿಡಿಸುವ ಮೂಲಕ ಕೆಲಸಕ್ಕೂ ಸೈ, ಸದಾ ಪ್ರಯಾಣಿಕರ ಒಡಾಟದಿಂದಲೇ ಬ್ಯುಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದಲ್ಲಿ ನಾಡಹಬ್ಬ ದಸರಾ ಆಚರಣೆ ಮಾಡುವ ಮೂಲಕ ನಮ್ಮ ಸಂಸ್ಕ್ರತಿಯನ್ನು ದೇಶ ವಿದೇಶಕ್ಕೆ ಹಬ್ಬಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
