Friday, April 11, 2025
Google search engine

Homeಸ್ಥಳೀಯಅ.18 ರಂದು ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ:  ಬೆಲೆ ಎಷ್ಟು ? ಎಲ್ಲಿ ಖರೀದಿಸಬಹುದೆಂಬ ಮಾಹಿತಿ...

ಅ.18 ರಂದು ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ:  ಬೆಲೆ ಎಷ್ಟು ? ಎಲ್ಲಿ ಖರೀದಿಸಬಹುದೆಂಬ ಮಾಹಿತಿ ಇಲ್ಲಿದೆ

ಮೈಸೂರು: ನಾಡಹಬ್ಬ ಮೈಸೂರು ದಸರಾ 2023ರ ವೀಕ್ಷಣೆಗಾಗಿ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗು ಸಾರ್ವಜನಿಕರ ಅನುಕೂಲಕ್ಕಾಗಿ “ಗೋಲ್ಡ್ ಕಾರ್ಡ್” ಸೌಲಭ್ಯವನ್ನು ಜಿಲ್ಲಾಡಳಿತ ಅ.18 ರಂದು ಬೆಳಗ್ಗೆ 10: ಗಂಟೆಗೆ ಬಿಡುಗಡೆ ಮಾಡಲಿದ್ದು, ಆನ್ ಲೈನ್ ಮುಖಾಂತರ ಖರೀದಿ ಮಾಡಬಹುದಾಗಿದೆ.

ಗೋಲ್ಡ್ ಕಾರ್ಡ್ ಬೆಲೆ ರೂ.6,000 ಗಳಾಗಿರುತ್ತದೆ. ಗೋಲ್ಡ್ ಕಾರ್ಡ್ ಲಭ್ಯತೆ ಅನುಗುಣವಾಗಿ ಆನ್‌ಲೈನ್ ಮೂಲಕ ವೆಬ್ ಸೈಟನ್ ನಲ್ಲಿ ಖರೀದಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿಗೆ ಗರಿಷ್ಠ ಎರಡು ಗೋಲ್ಡ್ ಕಾರ್ಡ ಖರೀದಿಸಬಹುದಾಗಿದೆ.

‘ಜಂಬೂಸವಾರಿ’ ಮತ್ತು ‘ಪಂಜಿನ ಕವಾಯಿತು’ ಟಿಕೆಟ್ ಬಿಡುಗಡೆ

ಅದೇ ರೀತಿ ಅ. 24 ರ ‘ದಸರಾ ಜಂಬೂಸವಾರಿ’ ಮತ್ತು ‘ಪಂಜಿನ ಕವಾಯಿತು’ ವೀಕ್ಷಣೆಗೆ ‘ಟಿಕೆಟ್‌’ಗಳನ್ನು ಸಹ ಅ.18 ರಂದು ಬೆಳಗ್ಗೆ 10:00 ಗಂಟೆಗೆ ಆನ್‌ ಲೈನ್ ಮೂಲಕ ಖರೀದಿಗೆ ಬಿಡುಗಡೆ ಮಾಡಲಿದ್ದು, ಅರಮನೆ ಆವರಣದೊಳಗೆ ದಸರಾ ಜಂಬೂಸವಾರಿ ವೀಕ್ಷಣೆಗೆ ಪ್ರತಿ ಟಿಕೆಟ್ ಬೆಲೆ ರೂ. 3,000 ಮತ್ತು ರೂ. 2000 ಗಳನ್ನು ನಿಗದಿಪಡಿಸಲಾಗಿದೆ.

ಬನ್ನಿಮಂಟಪದಲ್ಲಿ ಪಂಜಿನ ಕವಾಯಿತು ವೀಕ್ಷಣೆಗೆ ಪ್ರತಿ ಟಿಕೇಟಿನ ಬೆಲೆ ರೂ. 500 ಗಳನ್ನು ನಿಗದಿಪಡಿಸಲಾಗಿದೆ. ಸದರಿ ಟಿಕೆಟ್ ಮತ್ತು ಗೋಲ್ಡ್‌ ಕಾರ್ಡ್ ಖರೀದಿಗಾಗಿ mysoredasara.gov.in ವೆಬ್‌ ಸೈಟ್‌ನ್ನು ಸಂಪರ್ಕಿಸಬಹುದಾಗಿದೆ.

ಆನ್‌ ಲೈನ್ ಮೂಲಕ ಗೋಲ್ಡ್ ಕಾರ್ಡ್/ ಟಿಕೇಟ್ ಖರೀದಿಸಿದ ನಂತರ, ಖರೀದಿಸಿದವರಿಗೆ ಗೋಲ್ಡ್ ಕಾರ್ಡ್/ಟಿಕೇಟ್ ಸ್ವೀಕರಿಸುವ ಸ್ಥಳ, ದಿನಾಂಕ, ಸಮಯ ಹಾಗು ಇನ್ನಿತರೆ ಮಾಹಿತಿಯನ್ನು ಅವರ ಮೊಬೈಲಿಗೆ ಎಸ್ ಎಂ ಎಸ್ ಮೂಲಕ ಮತ್ತು ಇ-ಮೇಲ್ ಐ ಡಿಗೆ ಮಾಹಿತಿ ಕಳುಹಿಸಲಾಗುವುದು. ಅದಕ್ಕನುಸಾರವಾಗಿ ಖರೀದಿಸಿದವರು ಅವರ ಭಾವಚಿತ್ರವಿರುವ ಯಾವುದಾದರೂ ಒಂದು ಪೋಟೋ ಐ ಡಿ ಹಾಜರುಪಡಿಸಿ ಗೋಲ್ಡ್ ಕಾರ್ಡ್/ಟಿಕೆಟ್ ಪಡೆದುಕೊಳ್ಳಬಹುದಾಗಿದೆ.

ಗೋಲ್ಡ್ ಕಾರ್ಡ್/ ಟಿಕೆಟ್ ಖರೀದಿಗಾಗಿ mysoredasara.gov.in ಸಂಪರ್ಕಿಸಬಹುದಾಗಿದೆ. ಆನ್‌ ಲೈನ್ ಹೊರತುಪಡಿಸಿ ಇತರೆ ಯಾವುದೇ ರೀತಿಯಲ್ಲಿ ಗೋಲ್ಡ್‌ ಕಾರ್ಡ್ ಮತ್ತು ಟಿಕೇಟ್ ಮಾರಾಟ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular