Saturday, April 19, 2025
Google search engine

Homeರಾಜ್ಯನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ

ನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ


ಬೆಂಗಳೂರು : ರಾಜ್ಯ ಹೈಕೋರ್ಟ್ ಗೆ ಅ. ೩ ರಿಂದ ೭ ದಿನಗಳ ಕಾಲ ದಸರಾ ರಜೆ ಇರಲಿದ್ದು, ಹೈಕೋರ್ಟ್ ರಜಾಕಾಲದ ಪೀಠ ಕಾರ್ಯ ನಿರ್ವಹಿಸಲಿದೆ.

ಅ. ೧೧ರಂದು ಆಯುಧಪೂಜೆ, ಅ. ೧೨ರಂದು ವಿಜಯದಶಮಿ, ಎರಡನೇ ಶನಿವಾರ, ಅ. ೧೩ ಭಾನುವಾರ ರಜೆ ಇರುವುದರಿಂದ ಅಕ್ಟೋಬರ್ ೧೪ ರಿಂದ ಕೋರ್ಟ್ ಕಲಾಪಗಳು ಪುನರಾರಂಭ ಆಗಲಿವೆ. ಬೆಂಗಳೂರಿನ ಹೈಕೋರ್ಟ್ ಪ್ರಧಾನಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ದಸರಾ ರಜೆ ಅನ್ವಯವಾಗಲಿದೆ.

ಅಕ್ಟೋಬರ್ ೪ ಮತ್ತು ೯ ರಂದು ತುರ್ತು ಪ್ರಕರಣಗಳ ವಿಚಾರಣೆಗೆ ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳಲ್ಲಿ ತಲಾ ಒಂದು ವಿಭಾಗೀಯ ನ್ಯಾಯಪೀಠ ಹಾಗೂ ಎರಡು ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ.

RELATED ARTICLES
- Advertisment -
Google search engine

Most Popular