Friday, April 4, 2025
Google search engine

Homeದೇಶಉತ್ತರಾಖಂಡದಲ್ಲಿ ಮತ್ತೆ ನಡುಗಿದ ಭೂಮಿ

ಉತ್ತರಾಖಂಡದಲ್ಲಿ ಮತ್ತೆ ನಡುಗಿದ ಭೂಮಿ

ಉತ್ತರಾಖಂಡ: ಚಮೋಲಿಯಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪನ ಹಿನ್ನೆಲೆ ಜನರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯು 2.8 ರಷ್ಟಿದೆ ಎಂದು ತಿಳಿದು ಬಂದಿದೆ. ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಆದರೆ, ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇಂದು ಬೆಳಗ್ಗೆ 10.37ಕ್ಕೆ ಉತ್ತರಾಖಂಡದ ಚಮೋಲಿಯಲ್ಲಿ ಭೂಕಂಪದ ಅನುಭವವಾಗಿದೆ. ಕಂಪನದ ಅನುಭವವಾದ ಕೂಡಲೇ ಜನರು ಮನೆಯಿಂದ ಹೊರಬಂದಿದ್ದಾರೆ. ಇನ್ನು ಭೂಕಂಪದ ತೀವ್ರತೆಯು 2.8 ರಷ್ಟು ದಾಖಲಾಗಿದ್ದು, ಯಾವುದೇ ಹಾನಿಯ ಬಗ್ಗೆ ವರದಿ ಆಗಿಲ್ಲ.

ಗಡಿನಾಡಿನ ಜಿಲ್ಲಾ ಕೇಂದ್ರವಾದ ಪಿಥೋರಗಢದಲ್ಲಿ ಹಿಂದಿನ ದಿನವೂ ಭೂಕಂಪನದ ಅನುಭವವಾಗಿತ್ತು. ಪಿಥೋರಗಢ್‌ನಲ್ಲಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆ 2.7 ರಷ್ಟಿದೆ. ಆದ್ರೆ ಜಿಲ್ಲೆಯಲ್ಲಿ ಎಲ್ಲಿಯೂ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ, ಕಂಪನದ ಅನುಭವವಾದ ಕೂಡಲೇ ಜನರು ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular