Thursday, April 3, 2025
Google search engine

Homeದೇಶಉತ್ತರಾಖಂಡದಲ್ಲಿ ಕಂಪಿಸಿದ ಭೂಮಿ, ಭಯಭೀತರಾದ ಜನತೆ

ಉತ್ತರಾಖಂಡದಲ್ಲಿ ಕಂಪಿಸಿದ ಭೂಮಿ, ಭಯಭೀತರಾದ ಜನತೆ

ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಎರಡು ಜಿಲ್ಲೆಗಳಲ್ಲಿ ಭೂಮಿ ಮತ್ತೊಮ್ಮೆ ಕಂಪಿಸಿದೆ. ಚಮೋಲಿ ಮತ್ತು ಪಿಥೋರಗಢ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿದೆ.

ಚಮೋಲಿಯಲ್ಲಿ ಭೂಕಂಪನ: ಜಿಲ್ಲೆಯ ಜನತೆಗೆ ಭೂಕಂಪನದ ಅನುಭವವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಭೂಕಂಪದ ಕೇಂದ್ರ ಬಿಂದು ೨೨ ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ. ಚಮೋಲಿಯಲ್ಲಿ ಭೂಕಂಪನದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ ೨.೬ ಎಂದು ಅಳೆಯಲಾಗಿದ್ದು, ಇಂದು ಭೂಕಂಪ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಉತ್ತರಾಖಂಡದ ಮತ್ತೊಂದು ಸೂಕ್ಷ್ಮ ಜಿಲ್ಲೆ ಪಿಥೋರಗಢದಲ್ಲೂ ಭೂಕಂಪ ಸಂಭವಿಸಿದೆ. ಮುಂಜಾನೆ ೩.೧೮ಕ್ಕೆ ಇಲ್ಲಿ ಭೂಕಂಪ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಥೋರಗಢದಲ್ಲಿ ಭೂಕಂಪದ ತೀವ್ರತೆ ೨.೯ ಆಗಿದೆ. ಇಲ್ಲಿ ಭೂಕಂಪದ ಆಳ ೨೦ ಕಿಲೋಮೀಟರ್ ಆಗಿದೆ. ಪಿಥೋರಗಢನಲ್ಲಿಯೂ ಭೂಕಂಪದಿಂದಾಗಿ ಯಾವುದೇ ಜೀವ ಅಥವಾ ಆಸ್ತಿ ನಷ್ಟದ ಸುದ್ದಿಯಿಲ್ಲ.

ಭಾರತದ ನೆರೆಯ ರಾಷ್ಟ್ರಗಳಾದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲೂ ಭೂಕಂಪನದ ಅನುಭವವಾಗಿದೆ. ಅಫ್ಘಾನಿಸ್ತಾನದಲ್ಲಿ ಬೆಳಗ್ಗೆ ೭.೦೮ಕ್ಕೆ ೪.೪ ತೀವ್ರತೆಯ ಭೂಕಂಪನದ ಅನುಭವವಾಗಿದ್ದು, ಇಲ್ಲಿ ಭೂಕಂಪದ ಬಿಂದು ೧೫೮ ಕಿ.ಮೀ ಆಳದಲ್ಲಿ ಪತ್ತೆಯಾಗಿದೆ. ಮತ್ತೊಂದೆಡೆ, ಪಾಕಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ ೪ ತೀವ್ರತೆಯ ಭೂಕಂಪ ಸಂಭವಿಸಿದೆ. ಪಾಕಿಸ್ತಾನದಲ್ಲಿ ಮುಂಜಾನೆ ೩.೧೩ಕ್ಕೆ ಭೂಮಿ ಕಂಪಿಸಿದೆ ಎಂಬ ಮಾಹಿತಿ ಸಿಕ್ಕಿದೆ.

RELATED ARTICLES
- Advertisment -
Google search engine

Most Popular