ಮಡಿಕೇರಿ: ಕೊಡಗು ಹಾಗೂ ಮೈಸೂರು ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ, ಬಸವನತ್ತೂರು ಸೇರಿದಂತೆ ಹಲವೆಡೆ ಭೂಕಂಪಿಸಿದ ಅನುಭವವಾಗಿದೆ.
ಇಂದು ಬೆಳಿಗ್ಗೆ ೬.೩೫ರ ಸುಮಾರಿನಲ್ಲಿ ಭಾರಿ ಸ್ವರೂಪದ ಶಬ್ದ ಕೇಳಿ ಬಂತು. ಈ ವೇಳೆ ೨ ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ. ಭೂಮಿ ಕಂಪಿಸುವ ವೇಳೆ ಗುಂಡಿಗಳಿರುವ ರಸ್ತೆಯಲ್ಲಿ ಲಾರಿ ಚಲಿಸುವಾಗ ಉಂಟಾಗುವ ಶಬ್ಧದಂತೆ ಸದ್ದು ಉಂಟಾಗಿದೆ. ಕೆಲವೆಡೆ ಡ್ಯಾಂನಲ್ಲಿ ನೀರು ಬಿಟ್ಟಾಗ ಆಗುವ ಶಬ್ಧ ಕೇಳಿದ ಅನುಭವ ಉಂಟಾಗಿದೆ. ಭೂಮಿಯಿಂದ ಬಂದ ವಿಚಿತ್ರ ಶಬ್ಧದಿಂದ ಜನ ಆತಂಕಕ್ಕೊಳಗಾಗಿದ್ದಾರೆ.
ಕುಶಾಲನಗರ ಸಮೀಪದಲ್ಲೇ ಹಾರಂಗಿ ಜಲಾಶಯವಿದ್ದು, ಜನರಲ್ಲಿ ಆತಂಕ ಮೂಡಿದೆ. ವಿಜ್ಞಾನಿಗಳು ಇನ್ನಷ್ಟೇ ನಿಖರವಾದ ಮಾಹಿತಿ ನೀಡಬೇಕಾಗಿದೆ.