Friday, April 4, 2025
Google search engine

Homeರಾಜ್ಯಅರುಣಾಚಲ ಪ್ರದೇಶದಲ್ಲಿ ಭೂಕಂಪ: ೩.೧ ತೀವ್ರತೆಯಲ್ಲಿ ಕಂಪಿಸಿದ ಭೂಮಿ

ಅರುಣಾಚಲ ಪ್ರದೇಶದಲ್ಲಿ ಭೂಕಂಪ: ೩.೧ ತೀವ್ರತೆಯಲ್ಲಿ ಕಂಪಿಸಿದ ಭೂಮಿ

ಸುಬನ್ಸಿರಿ: ಜಿಲ್ಲೆಯಲ್ಲಿ ಇಂದು ಬುಧವಾರ ಬೆಳಗ್ಗೆ ೪.೫೫ ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. ಈ ಸಮಯದಲ್ಲಿ ಎಲ್ಲರೂ ಅವರವರ ಮನೆಗಳಲ್ಲಿ ಮಲಗಿದ್ದರು. ಭೂಮಿಯು ನಡುಗಿದಾಗ ಜನರು ಇದ್ದಕ್ಕಿದ್ದಂತೆ ನಿದ್ದೆಯಿಂದ ಎದ್ದು ಗಾಬರಿಯಿಂದ ಹೊರ ಓಡಿ ಬಂದಿದ್ದಾರೆ. ಕೆಲವರು ಮನೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಅವಿತುಕೊಂಡಿದ್ದಾರೆ. ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಈ ಹಿಂದೆ ಮಾರ್ಚ್ ೨೧ರ ಮುಂಜಾನೆ ಅರುಣಾಚಲ ಪ್ರದೇಶದಲ್ಲಿ ಎರಡು ಭೂಕಂಪಗಳು ಸಂಭವಿಸಿದ್ದವು. ೩.೭ ರ ತೀವ್ರತೆಯೊಂದಿಗೆ ಮೊದಲ ಭೂಕಂಪವು ೦೧:೪೯ ಕ್ಕೆ ಸಂಭವಿಸಿತ್ತು. ಅದೇ ಸಮಯದಲ್ಲಿ ಸರಿಯಾಗಿ ಎರಡು ಗಂಟೆಗಳ ನಂತರ ಬೆಳಿಗ್ಗೆ ೦೩:೪೦ ಕ್ಕೆ, ಎರಡನೇ ಭೂಕಂಪನ ವರದಿಯಾಗಿತ್ತು. ಈ ಭೂಕಂಪದ ತೀವ್ರತೆ ೩.೪ ಮತ್ತು ಅದರ ಕೇಂದ್ರಬಿಂದು ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್‌ನಲ್ಲಿತ್ತು. ಇದರಿಂದ ಜನ ಬೆಚ್ಚಿಬಿದ್ದಿದ್ದರು. ಇದರಿಂದ ಯಾವುದೇ ಹಾನಿ ಅಥವಾ ಸಾವುನೋವುಗಳ ತಕ್ಷಣದ ವರದಿಯಾಗಿಲ್ಲ.

RELATED ARTICLES
- Advertisment -
Google search engine

Most Popular