Friday, April 11, 2025
Google search engine

Homeದೇಶತಮಿಳುನಾಡು ಇಂಧನ ಸಚಿವ ಸೆಂಥಿಲ್ ಬಾಲಾಜಿ ನಿವಾಸದ ಮೇಲೆ ಇಡಿ ದಾಳಿ

ತಮಿಳುನಾಡು ಇಂಧನ ಸಚಿವ ಸೆಂಥಿಲ್ ಬಾಲಾಜಿ ನಿವಾಸದ ಮೇಲೆ ಇಡಿ ದಾಳಿ

ಚೆನ್ನೈ: ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ತಮಿಳುನಾಡು ಇಂಧನ ಸಚಿವ ವಿ ಸೆಂಥಿಲ್ ಬಾಲಾಜಿ ಮತ್ತು ಅವರ ಆಪ್ತರ ಮನೆಯಲ್ಲಿ ಇಡಿ ಹುಡುಕಾಟ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ತಮಿಳುನಾಡು ಇಂಧನ ಸಚಿವ ವಿ ಸೆಂಥಿಲ್ ಬಾಲಾಜಿ ಮತ್ತು ಅವರ ಆಪ್ತರ ಮನೆಗಳಲ್ಲಿ ಇಡಿ ಹುಡುಕಾಟ ಆರಂಭಿಸಿದೆ. ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿಗೆ ಸಂಬಂಧಿಸಿದ ಮನೆಗಳ ಮೇಲೆ ದಾಳಿ ನಡೆಸಿದ್ದರು.

ಅಧಿಕಾರಿಗಳು, ಅಕ್ರಮ ಹಣ ವರ್ಗಾವಣೆ ಭಾಗವಾಗಿ ತಮಿಳುನಾಡು ಇಂಧನ ಸಚಿವ ವಿ ಸೆಂಥಿಲ್ ಬಾಲಾಜಿ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೋಧದ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸೆಂಥಿಲ್ ಬಾಲಾಜಿ, ಜಾರಿ ನಿರ್ದೇಶನಾಲಯ ನಡೆಸುತ್ತಿರುವ ಶೋಧದ ಉದ್ದೇಶವೇನೆಂದು ನನಗೆ ತಿಳಿದಿಲ್ಲ, ಆ ಬಗ್ಗೆ ನಾವು ಕಾದು ನೋಡಬೇಕಾಗಿದೆ, ಆದರೆ ಈ ಬಗ್ಗೆ ನನಗೆ ಯಾವುದೇ ಪೂರ್ವ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಜಾರಿ ನಿರ್ದೇಶನಾಲಯಕ್ಕೆ ಅಥವಾ ಆದಾಯ ತೆರಿಗೆ ಇಲಾಖೆಯಾಗೆ ಸಂಪೂರ್ಣ ಸಹಕಾರ ನೀಡಲು ನಾನು ಸಿದ್ಧನಿದ್ದೇನೆ. ಅಲ್ಲದೆ ಅವರಿಗೆ ಬೇಕಿದ್ದರೆ ವಿವರಣೆಗೆ ಬರಲು ಸಿದ್ಧನಿದ್ದೇನೆ ಎಂದು ಸೆಂಥಿಲ್ ಬಾಲಾಜಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular