Saturday, April 19, 2025
Google search engine

Homeರಾಜ್ಯಸುದ್ದಿಜಾಲಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ತಲುಪಿಸಲು ಶ್ರಮ: ಡಿ.ಜೆ.ರೇಖಾ ಜಗದೀಶ್

ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ತಲುಪಿಸಲು ಶ್ರಮ: ಡಿ.ಜೆ.ರೇಖಾ ಜಗದೀಶ್

ಹೊಸೂರು: ಸರ್ಕಾರದಿಂದ ಸಿಗುವ ಸವಲತ್ತು ಮತ್ತು  ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಲು ಗ್ರಾಪಂನ ಆಡಳಿತದೊಂದಿಗೆ ಶ್ರಮಿಸುವುದಾಗಿ ಹಳಿಯೂರು ಗ್ರಾ.ಪಂ.ಅಧ್ಯಕ್ಷೆ ಡಿ.ಜೆ.ರೇಖಾ ಜಗದೀಶ್ ಹೇಳಿದರು.

ಗುರುವಾರ ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾ.ಪಂ.ನಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ತಮ್ಮ ಅವಧಿಯಲ್ಲಿ  ಕುಡಿಯುವ ನೀರು,ಸ್ವಚ್ಚತೆ ಬೀದಿ ದೀಪದ ನಿರ್ವಹಣೆಗೆ ಹೆಚ್ಚಿನ ಅದ್ಯತೆ ನೀಡುವುದಾಗಿ ತಿಳಿಸಿದರು.

ಗ್ರಾ.ಪಂ.ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪವಾಗಿ ಅನುಷ್ಠಾನ ಮಾಡಿ ಕೂಲಿಕಾರ್ಮಿಕರಿಗೆ ಉದ್ಯೋಗ ಕೊಡಲು ಕ್ರಮಕೈಗೊಳ್ಳುವುದರ ಜತಗೆ ಈ ಯೋಜನೆಯಡಿ ರಸ್ತೆ,ಚರಂಡಿ ಮತ್ತು ತೋಟಗಾರಿಕೆ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದಾಗಿ ಹೇಳಿದರು.

ಅಧಿಕಾರ ಸ್ವೀಕರಿಸಿದ ಉಪಾಧ್ಯಕ್ಷ ಎಸ್.ಎನ್.  ನೂತನ್ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಗ್ರಾಮಗಳನ್ನು ಪಕ್ಷಾತೀತವಾಗಿ ಅಭಿವೃದ್ಧಿಪಡಿಸಿ ಉತ್ತಮವಾಗಿ ಸಾರ್ವಜನಿಕರಿಗೆ ಉತ್ತಮ ಆಡಳಿತ ಸೇವೆ ಒದಗಿದಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

 ಈ ಸಂದರ್ಭದಲ್ಲಿ ಗ್ರಾ.ಪಂ.ಪಿಡಿಓ ಚಿದಾನಂದ್, ಸದಸ್ಯರಾದ ಮಣಿ,ರಾಜೇಶ್ವರಿ, ಮಾಜಿ ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ಹಳಿಯೂರು ಜಗದೀಶ್, ಡಿ.ಜೆ.ಮಂಜು ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular