ವರದಿ : ವಿನಯ್ ದೊಡ್ಡಕೊಪ್ಪಲು
ಕೆ .ಆರ್.ನಗರ: ಅ.೨೮ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನದ
ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಏಳನೇ ದಿನದ ಬುಧವಾರದವರೆಗೆ ಒಟ್ಟು ೩೨ ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಬಿಆರ್‌ಸಿ ಕೇಂದ್ರದಲ್ಲಿ ತೆರೆದಿರುವ ಚುನಾವಣಾ ಕಛೇರಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ನೌಕರರು ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿ ಚುನಾವಣಾಧಿಕಾರಿ ವೆಂಕಟೇಶ್ ಅವರಿಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಒಂಟಿಮನೆನಾಗರಾಜು, ರಾಜಶೇಖರ್, ಹೆಚ್.ಟಿ.ಪಾಂಡು, ಬಿ.ಎಲ್.ಮಹದೇವ್, ಕೆ.ಎಲ್.ಮಂಜುನಾಥ್, ರಾಜೇಶ್ವರಿ, ಪೂರ್ಣಿಮ ಮತ್ತು ಶಂಕರೇಗೌಡ, ಸಮಾಜ ಕಲ್ಯಾಣ
ಇಲಾಖೆಯಿಂದ ಸಿ.ಇ.ಉಮೇಶ್, ಪ್ರೌಢಶಾಲಾ ಶಿಕ್ಷಣ ಇಲಾಖೆ ವತಿಯಿಂದ ಎಸ್.ಎನ್.ಮಂಜು, ಹೆಚ್.ಟಿ.ಲೋಕೇಶ್, ಕೆ.ಮಧುಕುಮಾರ್ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಆಡಳಿತ ಕಛೇರಿಯಿಂದ ಎಂ.ಎಸ್.ಲೋಕೇಶ್, ಪಂಚಾಯತ್ ರಾಜ್ ಇಲಾಖೆ
ವತಿಯಿಂದ ಆರ್.ಮಂಜುನಾಥ್, ಕೆ.ಎಸ್.ಸತೀಶ್‌ಕುಮಾರ್, ಎಸ್.ಎಸ್.ಸಂದೀಪ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿ.ಜೆ.ಮಹೇಶ್, ಎಸ್.ಮಧುಸೂದನ್, ಅಬಕಾರಿ ಇಲಾಖೆ ವತಿಯಿಂದ ಕೆ.ಪಿ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಸಿ.ಎ.ಅಣ್ಣಯ್ಯ,
ಭೂಮಾಪನಾ ಇಲಾಖೆಯಿಂದ ಸಿ.ಸುರೇಶ್, ಕೆ.ಗೋಪಾಲ್, ನ್ಯಾಯಾಂಗ ಇಲಾಖೆಯಿಂದ ಎಸ್.ಎ.ಸತೀಶ್, ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಎಂ.ಎಸ್.ರಮೇಶ್, ವಸಂತ್‌ಕುಮಾರ್, ಆರ್‌ಡಿಪಿಆರ್ ವತಿಯಿಂದ
ಕರೀಗೌಡ, ಜಿ.ಟಿ.ಸಂತೋಷ್, ಪಶುಪಾಲನಾ ಇಲಾಖೆ ವತಿಯಿಂದ ಡಾ.ಹೆಚ್.ಪಿ.ಹರೀಶ್, ಕಂದಾಯ ಇಲಾಖೆಯಿಂದ ಎಸ್.ಆರ್.ಯಶವಂತ್, ಕೃಷಿ ಇಲಾಖೆಯಿಂದ ಎಸ್.ಹರೀಶ್, ತೋಟಗಾರಿಕೆ ಇಲಾಖೆಯಿಂದ ಜಿ.ಜೆ.ಶಂಕರ್, ಪ್ರಥಮ ದರ್ಜೆ ಕಾಲೇಜಿನಿಂದ ಪಿ.ಪ್ರಶಾಂತ್ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.