Friday, April 4, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ ಸರ್ಕಾರಿ ನೌಕರರ ಸಂಘ ಅಧ್ಯಕ್ಷರಾಗಿ ಡಾ.ಡಿ.ನಟರಾಜು ಆಯ್ಕೆ : ಶಾಸಕ ಡಿ.ರವಿಶಂಕರ್ ಅಭಿನಂದನೆ

ಕೆ.ಆರ್.ನಗರ ಸರ್ಕಾರಿ ನೌಕರರ ಸಂಘ ಅಧ್ಯಕ್ಷರಾಗಿ ಡಾ.ಡಿ.ನಟರಾಜು ಆಯ್ಕೆ : ಶಾಸಕ ಡಿ.ರವಿಶಂಕರ್ ಅಭಿನಂದನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ನಿರ್ದೇಶಕರಿಗೆ ಚುನಾಯಿತ ಜನಪ್ರತಿನಿಧಿಗಳಷ್ಟೆ ಜವಬ್ದಾರಿಯಿದ್ದು ನೀವುಗಳು ಅಭಿವೃದ್ದಿ ವಿಚಾರದಲ್ಲಿ ಅತ್ಯಂತ ಜಾಗರೂಕರಾಗಿ ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಕೆ.ಆರ್.ನಗರ ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಶಾಸಕರ ಕಛೇರಿಯಲ್ಲಿ ನಡೆದ ತಾಲೂಕು ಸರ್ಕಾರಿ
ನೌಕರರ ಸಂಘದ ನಿರ್ದೇಶಕರುಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ನಮ್ಮೊಂದಿಗೆ ನೀವು ಕೈ ಜೋಡಿಸಿ ದುಡಿದರೆ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಬಹುದು ಎಂದರು.

ನೌಕರರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವವರು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸದಸ್ಯರ ಸಲಹೆ ಮತ್ತು ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳ ಅನುಷ್ಠಾನಕ್ಕೆ ಬದ್ದರಾಗಿದ್ದರೆ ಎಲ್ಲಾ ಉತ್ತಮ ಕೆಲಸ ಮಾಡುವುದರ ಜತೆಗೆ ಕೆ.ಆರ್.ನಗರ ತಾಲೂಕು ಸರ್ಕಾರಿ ನೌಕರರ ಸಂಘವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಬಹುದು ಎಂದು ತಿಳಿಸಿದರು.

ಸಂಘಟನೆಗಳು ತಮ್ಮ ಸಂಘದ ಸದಸ್ಯರು ಮತ್ತು ನೌಕರರ ಹಿತ ಕಾಯುವುದನ್ನೇ ತಮ್ಮ ಪ್ರಧಾನ ಅಂಶವಾಗಿಟ್ಟುಕೊoಡು ಕೆಲಸ ಮಾಡಿದರೆ ಭವಿಷ್ಯದಲ್ಲಿ ಎಲ್ಲರಿಗೂ ಅನುಕೂಲವಾಗಲಿದ್ದು ಈ
ಕೆಲಸವನ್ನು ನಿಮ್ಮ ಸಂಘ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆ ನಡೆಸದೆ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ತಮ್ಮ ಸಲಹೆಯನ್ನು ಪುರಸ್ಕರಿಸಿದ ನಿರ್ದೇಶಕರುಗಳಿಗೆ ಅಭಿನಂದನೆ ಸಲ್ಲಿಸಿದ ಶಾಸಕರು ನೂತನ ಅಧ್ಯಕ್ಷರನ್ನಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಅವರನ್ನು ಬೆಂಬಲಿಸಲು ಎಲ್ಲರೂ ನಿರ್ಧರಿಸಿದ್ದಾರೆ ಎಂದು ಘೋಷಣೆ ಮಾಡಿದರು.

ಡಾ.ನಟರಾಜು

ಈ ಸಂಧರ್ಭದಲ್ಲಿ ಶಾಸಕರು ಸಂಘದ ಎಲ್ಲಾ ೩೨ ಮಂದಿ ನಿರ್ದೇಶಕರುಗಳನ್ನು ಸನ್ಮಾನಿಸಿದರು. ಇದರ ಜತೆಗೆ ಸಂಘದ ಖಜಾಂಚಿಯಾಗಿ ಕೃಷಿ ಇಲಾಖೆಯ ಹರೀಶ್ ಮತ್ತು ರಾಜ್ಯ ಪರಿಷತ್ ಸದಸ್ಯರನ್ನಾಗಿ ಕಂದಾಯ ಇಲಾಖೆಯ ಎಸ್.ಆರ್.ಯಶವಂತ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದು ಉಳಿದ ಪದಾಧಿಕಾರಿಗಳನ್ನು
ಅಧ್ಯಕ್ಷರು ಆಡಳಿತ ಚುರುಕು ಮಾಡುವ ಅನುಕೂಲಕ್ಕೆ ತಕ್ಕಂತೆ ಸರ್ವರಿಗೂ ಸಮಾನ ಅವಕಾಶ ನೀಡಿ ನೇಮಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹರೀಶ್ ಮತ್ತು ಯಶವಂತ್

ನಿರ್ದೇಶಕರಾದ ಸಿ.ಎಂ.ಅಣ್ಣಯ್ಯ, ಎಸ್.ಎಂ.ಗoಗಾಧರ್, ರಾಜಶೇಖರ, ಡಾ.ಹೆಚ್.ಪಿ.ಹರೀಶ್, ಎಸ್.ಶಶಿಕಾಂತ್, ದೊರೆಸ್ವಾಮಿ, ಆರ್.ಮಂಜುನಾಥ್, ಶಂಕರೇಗೌಡ, ಬಿ.ಎಲ್.ಮಹದೇವ, ಪೂರ್ಣಿಮ,
ಕೆ.ಮಧುಕುಮಾರ್, ಎಂ.ಎಸ್.ಲೋಕೇಶ್, ಕೆ.ಎಂ.ಮುರುಳಿ, ಎಂ.ಇ.ರಾಘವೇoದ್ರ, ಸಿ.ಇ.ಉಮೇಶ್,
ಜಿ.ಜೆ.ಮಹೇಶ್, ಎಂ.ಎಸ್.ಮಹದೇವ, ಎನ್.ರವಿಕುಮಾರ್, ಕೆ.ವಿ.ರಮೇಶ್, ಕೆ.ಎಸ್.ಪಾರ್ವತಿ, ಹೆಚ್.ವಿ.ಶಶಿಧರ್, ಹೆಚ್.ಡಿ.ಜಯಲಕ್ಷಿö್ಮ, ಎನ್.ಇ.ತುಳಸಿ, ಕೆ.ಸತೀಶ್‌ಕುಮಾರ್, ಜಿ.ಟಿ.ಸತೀಶ್, ಡಿ.ಆರ್.ಕುಮಾರ್, ಕೆ.ಪಿ.ಶಿವಕುಮಾರ್, ಡಿ.ರಘು ಮತ್ತು ಇ.ವಸಂತ್‌ಕುಮಾರ್ ಇದ್ದರು.

RELATED ARTICLES
- Advertisment -
Google search engine

Most Popular