ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಿಕಾರ್ಡ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಕಳೆದ ೧೯ರಂದು ನಡೆದ ಚುನಾವಣೆಯು ಪಾರದರ್ಶಕವಾಗಿ ನಡೆದಿಲ್ಲ. ಬದಲಾಗಿ ಶಾಸಕ ಡಿ.ರವಿಶಂಕರ್ ಆಣತಿಯಂತೆ ಅಧಿಕಾರಿಗಳು ಚುನಾವಣೆ ನಡೆಸಿದ್ದಾರೆ ಎಂದು ಪುರಸಭೆ ಸದಸ್ಯ ಉಮೇಶ್ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಸಾಲಗಾರಲ್ಲದ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತನಾಗಿ ಸ್ಫರ್ಧಿಸಿದ್ದೆ. ಆದರೆ ಶಾಸಕರು ಮತ್ತು ಅವರ ತಂದೆ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಕಾಂಗ್ರೆಸ್ ಬೆಂಬಲಿತ ಪುಷ್ಪಲತರಮೇಶ್ ಅವರನ್ನು ಗೆಲ್ಲಿಸಬೇಕೆಂಬ
ಉದ್ಧೇಶದಿoದ ಚುನಾವಣೆ ನಡೆಯುವ ಸ್ಥಳದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಠಿಕಾಣಿ ಹೂಡಿದ್ದರೆಂದು ದೂರಿದರು.
ಶಾಸಕ ಮತ್ತು ಅವರ ತಂದೆಯವರು ಪಿಕಾರ್ಡ್ ಬ್ಯಾಂಕಿನ ಚುನಾವಣೆ ಪ್ರಕ್ರಿಯೆಯಲ್ಲಿ ಪೂರ್ಣವಾಗಿ ಹಸ್ತಕ್ಷೇಪ ಮಾಡಿ ಅಧಿಕಾರ ಹಿಡಿಯಲೇಬೇಕೆಂಬ ಉದ್ಧೇಶದಿಂದ ಬ್ಯಾಂಕಿನ ವ್ಯವಸ್ಥಾಪಕ ಸೇರಿದಂತೆ ಸಹಕಾರ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ತಮಗಿಷ್ಟ ಬಂದoತೆ ಕ್ಷೇತ್ರ ಮರುವಿಂಗಡಣೆ, ಮತದಾರರ ಪಟ್ಟಿ ತಯಾರಿಕೆ
ಮತ್ತು ಮೀಸಲಾತಿ ನಿಗದಿಪಡಿಸುವಾಗ ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡಿಸಿಕೊಂಡಿದ್ದಾರೆ. ಇದಕ್ಕೆ
ಉದಾಹರಣೆ ಮಳಲಿ ಕ್ಷೇತ್ರ ಮೊದಲು ಮಹಿಳೆಗೆ ಮೀಸಲಾಗಿತ್ತು. ಆನಂತರ ಸಾಮಾನ್ಯವಾಗಿದೆ ಎಂದರು.
ಸಾಲಗಾರರಲ್ಲದ ಕ್ಷೇತ್ರದ ಒಟ್ಟು ೮೮೯ ಮಂದಿ ಮತದಾರರ ಪೈಕಿ ೩೮೯ ಮಂದಿಯನ್ನು ಅನರ್ಹಗೊಳಿಸಲಾಗಿದೆ. ಇದರಲ್ಲಿ ನವನಗರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್ ಇದ್ದಾರೆ.
ಅನರ್ಹಗೊಳಿಸಲು ಯಾವುದೇ ಹಣಕಾಸಿನ ವ್ಯವಹಾರ ಮಾಡಿಲ್ಲವೆಂಬ ಕಾರಣ ನೀಡುವ ಬ್ಯಾಂಕಿನ ಆಡಳಿತ
ಮಂಡಳಿ ಸ್ವಂತ ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲವೆoದು ಹೇಳಿದ ಉಮೇಶ್ ಪಿಕಾರ್ಡ್ ಬ್ಯಾಂಕಿನ ವ್ಯವಹಾರ ಎಂಸಿಡಿಸಿಸಿ ಬ್ಯಾಂಕಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಈ ರೀತಿಯಲ್ಲಿ ಅರ್ಹ ಮತದಾರರನ್ನು
ಅನರ್ಹಗೊಳಿಸುವುದರ ಜತೆಗೆ ಮರಣ ಹೊಂದಿರುವವರು ಹಾಗೂ ಸಾಲಗಾರರ ಕ್ಷೇತ್ರದಲ್ಲಿ ಮತದಾನ ಹೊಂದಿರುವವರಿoದ ಸಾಲಗಾರರಲ್ಲದ ಕ್ಷೇತ್ರಕ್ಕೆ ಮತದಾನ ಮಾಡಿಸಲಾಗಿದೆ ಎಂದು ಆರೋಪಿಸಿದರು.
ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಸಚಿವ ಸಾ.ರಾ.ಮಹೇಶ್‌ರವರ ಸೂಚನೆಯಂತೆ ನಾನು ಚುನಾವಣೆಯಲ್ಲಿ ಸ್ಫರ್ಧಿಸಿದ್ದು, ನನ್ನ ಸಮಾಜದ ಕೇವಲ ಮೂರು ಮಂದಿ ಮತದಾರರಿದ್ದರೂ ಪಕ್ಷದ ಬೆಂಬಲದಿoದ ಸ್ಫರ್ಧಿಸಲಾಯಿತು. ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ ಮತ್ತು ಹಣದ ಆಮಿಷ ನಡೆದಿದ್ದರೂ ಕೂಡ ನನ್ನ
ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ಧಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಸಂತೋಷ್‌ಗೌಡ, ಮಾಜಿ ಸದಸ್ಯ ಜಿ.ಪಿ.ಮಂಜು, ಮುಖಂಡರಾದ ಕೆ.ಜೆ.ಕುಚೇಲ, ಬಾಲಾಜಿಗಣೇಶ್ ಹಾಜರಿದ್ದರು.