ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮ ತಾಲ್ಲೂಕಿನ ಮಿರ್ಲೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರ ಆಯ್ಕೆಗೆ ಗುರುವಾರ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಎಂ.ಆರ್.ಕಾಂತರಾಜ್ ಒಬ್ಬರೇ ನಾಮಪತ್ರ ಸಲ್ಲಿಸಿದರು ಪ್ರತಿ ಸ್ಪರ್ದಿಯಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ಎಂ.ಆರ್. ಕಾಂತರಾಜ್ ಅವರನ್ನು ಅವಿರೋಧ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಇಲಾಖೆ ಚುನಾವಣಾಧಿಕಾರಿ ಎಸ್ ರವಿ ಘೋಷಿಸಿದರು.
ಮಿರ್ಲೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಎಸ್ ಯೋಗೇಶ್ ಅವರ ರಾಜಿನಾಮೇಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮಿರ್ಲೆ ರಾಜೀವ್ ಬಣದ ನಿರ್ಧೇಶಕರಾದ ಭಾಗ್ಯಮ್ಮ, ಎಂ.ಆರ್.ವಸಂತ್ ಕುಮಾರ್, ಶಾರದಬಾಯಿ, ಎಂ.ಕೆ.ಮಹೇಶ್, ಎಂ ಎಸ್ ಯೋಗೇಶ್, ರಂಗಸ್ವಾಮಿ, ಹಾಜರಿದ್ದು,ಉಳಿದ ನಿರ್ಧೆಶಕರು ಗೈರಾಗಿದ್ದರು.
ಕೋರಂ ಹೆಚ್ಚಾಗಿ ಇದ್ದ ಕಾರಣ ಚುನಾವಣಾ ಅಧಿಕಾರಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಮಾಡಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಕಾಂತರಾಜ್ ಅವರನ್ನು ಜಿಲ್ಲಾ ಪತ್ರಬರಹಗಾರ ಮಿರ್ಲೆ ರಾಜೀವ್, ಬಂಡಿಹೊಳೆಮೋಹನ್, ಕುಪ್ಪೆಬಾರೆವಾಸು, ಎಂ.ಜೆ.ನಾಗೇಶ್, ಕೃಷ್ಣೇಗೌಡ, ಎಂ.ಎನ್.ರಾಜೇಶ್, ಎಂ ಆರ್ ನಾಗೇಶ್, ರಂಗಣ್ಣ, ರಾಮಸ್ಡಾಮಿಗೌಡ, ಕಾರ್ಯದರ್ಶಿ ಬಿ.ಸಿ.ವಸಂತ್‌ಕುಮಾರ್ ಸೇರಿದಂತೆ ಹಲವರು ಅಭಿನಂದಿಸಿದರು.