Friday, April 18, 2025
Google search engine

Homeರಾಜ್ಯಸುದ್ದಿಜಾಲಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮದ್ದೂರು: ತಾಲೂಕಿನ ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಯು.ಆರ್.ರೂಪ, ಉಪಾಧ್ಯಕ್ಷರಾಗಿ ಎನ್.ಪಿ.ರಾಜಶೇಖರ್ ಅವರು ಚುನಾಯಿತರಾದರು.
ಸಂಘದ ಸಭಾಂಗಣಧಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯು.ಆರ್.ರೂಪ , ಪದ್ಮ, ಉಪಾಧ್ಯಕ್ಷ ಸ್ಥಾನಕೆ ಎನ್.ಪಿ.ರಾಜಶೇಖರ್, ಧನಂಜಯ ಅವರು ನಾಮ ಪತ್ರ ಸಲ್ಲಿಸಿದ್ದರು.
ಚುನಾವಣಾ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಯು.ಆರ್.ರೂಪ ಹಾಗೂ ಉಪಾಧ್ಯಕ್ಷರಾಗಿ ಎನ್.ಪಿ.ರಾಜಶೇಖರ್ ಅವರು ಕ್ರಮವಾಗಿ 7 ಮತಗಳನ್ನು ಪಡೆದು ಜಯಶೀಲರಾದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪದ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸಿದ್ದ ಧನಂಜಯ ಅವರು ಕ್ರಮವಾಗಿ 5 ಮತಗಳನ್ನು ಪಡೆದು ಸೋಲುಂಡರು.
ಚುನಾವಣಾಧಿಕಾರಿಯಾಗಿ ಸಂತೋಷ್ ಕರ್ತವ್ಯ ನಿರ್ವಹಿಸಿದರು.
ಸಂಘದ ನಿರ್ದೇಶಕರಾದ ನ.ಲಿ.ಕೃಷ್ಣ, ಶೇಖರ್, ಕರಿಯಪ್ಪ, ಗ್ರಾಪಂ ಸದಸ್ಯ ಅನು, ಮುಖಂಡರಾದ ಎನ್.ಆರ್.ಪ್ರಸನ್ನ, ದೊಡ್ಡಲಿಂಗೇಗೌಡ, ನಾಗರಾಜು, ಪುಟ್ಟೇಗೌಡ, ಎನ್.ಆರ್.ಪ್ರಸನ್ನ, ಕುಮಾರ್ ಸೇರಿದಂತೆ ಇತರರು ಇದ್ದರು.

RELATED ARTICLES
- Advertisment -
Google search engine

Most Popular