ಬೆಂಗಳೂರು: ಕರಗದ ಪಲ್ಲಕ್ಕಿ ಉತ್ಸವದ ವೇಳೆ ವಿದ್ಯುತ್ ಶಾಕ್‌ಗೆ ಇಬ್ಬರು ಬಲಿಯಾದ ದುರ್ಘಟನೆ ಎಲೆಕ್ಟ್ರಾನಿಕ್ ಸಿಟಿಯಯ ಅಗ್ನಿಶಾಮಕ ಠಾಣೆ ಬಳಿ ನಡೆದಿದೆ.
ಮೃತ ಯುವಕರನ್ನು ಜಿಗಣಿಯ ಯಾರಂಡಹಳ್ಳಿ ಹರಿಬಾಬು (೨೫) ಹಾಗೂ ವೀರಸಂದ್ರದ ರಂಗನಾಥ್ (೩೦) ಎಂದು ಗುರುತಿಸಲಾಗಿದೆ. ಹೆಬ್ಬಗೋಡಿ ಸಮೀಪದ ಗೊಲ್ಲಹಳ್ಳಿಯಲ್ಲಿ ಶನಿವಾರ ರಾತ್ರಿ ಕರಗ ಉತ್ಸವ ನಡೆದಿತ್ತು. ರಾತ್ರಿ ಕರಗ ಉತ್ಸವಕ್ಕೆ ಆಗಮಿಸಿದ್ದ ಪಲ್ಲಕ್ಕಿಗಳು, ಇಂದು ಭಾನುವಾರ ಕರಗ ಉತ್ಸವ ಮುಗಿಸಿಕೊಂಡು ವಾಪಸ್ ಆಗುತ್ತಿದ್ದಾಗ ಈ ಅವಘಡ ನಡೆದಿದೆ.