ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಹುಸೇನಪುರ ಸೇತುವೆ ಮೂಲಕ ಕೆ ಆರ್ ನಗರಕ್ಕೆ ಹಾದು ಹೋಗುವ ಮಾರ್ಗ ಮಧ್ಯೆ ವಿದ್ಯುತ್ ಕಂಬ ಬೀಳುವ ಅಪಾಯದಲ್ಲಿದ್ದು ಸಂಬಂಧ ಪಟ್ಟವರು ಇತ್ತ ಗಮನಹರಿಸಬೇಕಾಗಿ ವಕೀಲ ಹಾಗೂ ಜನಧ್ವನಿ ಫೌಂಡೇಷನ್ ಅಧ್ಯಕ್ಷ ಪ್ರವೀಣ್ ಮನವಿ ಮಾಡಿದ್ದಾರೆ.

ಈ ವ್ಯಾಪ್ತಿಯು ಹುಣಸೂರು ತಾಲೂಕಿಗೆ ಸೇರಿದ್ದು ಈ ಜಾಗದಲ್ಲಿ ರೈತರು ಹಾಗೂ ಜನರು ಹೆಚ್ಚು ಓಡಾಟ ಮಾಡುತ್ತಿರುತ್ತಾರೆ ಹಲವು ಬಾರಿ ಸಂಬಂಧ ಪಟ್ಟ ಇಲಾಖೆಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಇದರ ಬಗ್ಗೆ ಗಮನ ಹರಿಸಿ ಸರಿಪಡಿಸದಿದ್ದರೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.