Tuesday, September 16, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು - ಸುಬ್ರಹ್ಮಣ್ಯ ನಡುವಿನ ವಿದ್ಯುತ್‌ ಚಾಲಿತ ರೈಲು ಸೇವೆಗೆ ಚಾಲನೆ

ಮಂಗಳೂರು – ಸುಬ್ರಹ್ಮಣ್ಯ ನಡುವಿನ ವಿದ್ಯುತ್‌ ಚಾಲಿತ ರೈಲು ಸೇವೆಗೆ ಚಾಲನೆ

ಮಂಗಳೂರು (ದಕ್ಷಿಣ ಕನ್ನಡ) : ಅನೇಕ ದಿನಗಳ ಕನಸಾಗಿರುವ ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭಗೊಂಡಿದೆ. ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ರೈಲು ಆರಂಭಗೊಳ್ಳುವುದರೊಂದಿಗೆ ಈ ಭಾಗದ ಪ್ರಯಾಣಿಕರ ಬಹುಕಾಲದ ಕನಸು ನನಸಾಗಿದೆ.

ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೈಲು ನಿಲ್ದಾಣಗಳ ನಡುವಿನ ಹಳಿ ವಿದ್ಯುದೀಕರಣ ಯೋಜನೆ ಪೂರ್ಣಗೊಂಡು ಇದೀಗ ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ನಡುವೆ ವಿದ್ಯುತ್‌ಚಾಲಿತ ರೈಲುಗಳ ಓಡಾಟ ಆರಂಭಗೊಂಡಿದೆ. ಸೆ.11 ರಂದು ವಿದ್ಯುತ್‌ ಚಾಲಿತ ರೈಲು ಇಂಜಿನ್‌ನ ಪ್ರಾಯೋಗಿಕ ಪರೀಕ್ಷೆ ನಡೆದು ಅಧಿಕೃತ ಆರಂಭಕ್ಕೆ ದಿನ ನಿಗದಿಯಾಗಿತ್ತು. ಆದ್ರೆ ನಿನ್ನೆ ಅಧಿಕೃತವಾಗಿ ಆರಂಭಗೊಂಡಿದೆ. ವಿದ್ಯುತ್‌ ಚಾಲಿತ ಪ್ರಯಾಣಿಕ ರೈಲು ಸಂಚಾರ ಆರಂಭದೊಂದಿಗೆ ಭವಿಷ್ಯದಲ್ಲಿ ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟಕ್ಕೆ ಸಹಕಾರಿಯಾಗುವುದನ್ನು ನಿರೀಕ್ಷಿಸಲಾಗಿದೆ.

RELATED ARTICLES
- Advertisment -
Google search engine

Most Popular