Tuesday, April 22, 2025
Google search engine

Homeಸ್ಥಳೀಯವಿಜಯ ವಿಠ್ಠಲ ವಿದ್ಯಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಸೊಬಗು

ವಿಜಯ ವಿಠ್ಠಲ ವಿದ್ಯಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಸೊಬಗು

ಮೈಸೂರು: ಭೂಮಿ ಮರುಸ್ಥಾಪನೆ, ಮರುಭೂಮೀಕರಣ ಮತ್ತು ಬರಸ್ಥಿತಿ ಸ್ಥಾಪಕತ್ವ ಎಂಬ ಶೀರ್ಷಿಕೆ ಅಡಿಯಲ್ಲಿ ವಿಜಯ ವಿಠ್ಠಲ ವಿದ್ಯಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು.

ವಿಶ್ವಾದ್ಯಂತ ಸಮುದಾಯಗಳು ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ನಿರ್ಣಾಯಕ ಪರಿಸರ ಸವಾಲುಗಳನ್ನು ಈ ವಿಷಯವು ಎತ್ತಿ ತೋರಿಸುತ್ತದೆ. ಹಸಿರು ಉಳಿದರೆ , ಸ್ವರ್ಗವು ಈ ಧರೆ ಎಂಬಂತೆ ನಮ್ಮ ಶಾಲೆಯ ಗೌರವ ಕಾರ್ಯದರ್ಶಿ ವಾಸುದೇವ್ ಭಟ್ ರವರು ನೀರು ಎತ್ತುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವ ಪರಿಸರದ ಅಂಗವಾಗಿ ಗಿಡ ನೆಟ್ಟು ಪರಿಸರ ಉಳಿಸುವ ಗೌರವ ಕಾರ್ಯದರ್ಶಿ ವಾಸುದೇವ್ ಭಟ್ ರವರು ಗಿಡಗಳನ್ನು ಪ್ರಕಟಿಸಿದ್ದಾರೆ.ನಂತರ ಗೀತಾ ಶಿಂಧೆರವರು ರಚಿಸಿದ್ದಾರೆ. ಮನೆಗೊಂದು ಮರಗೊಂದು ವನ ಎಂಬ ಹಾಡನ್ನು ಮಕ್ಕಳು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು.

೬ನೇ ತರಗತಿಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಿಸಿ ಎಂಬ ಸ್ಲೋಗನ್ ಅಡಿಯಲ್ಲಿ ಕಿರು ನಾಟಕದ ಮೂಲಕ ಪರಿಸರ ಜಾಗೃತಿ ಬಗ್ಗೆ ತಿಳುವಳಿಕೆ ಮೂಡಿಸಿದರು.ಹಸಿರೇ ಉಸಿರು, ವೃಕ್ಷೋ ರಕ್ಷತಿ ರಕ್ಷಿತ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಮಕ್ಕಳ ಹಸುರಿನ ಪಾವಿತ್ರ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ವಿಜಯ ವಿಠ್ಠಲ ಶಾಲೆಯ ಪ್ರಾಂಶುಪಾಲೆ ವೀಣಾ.ಎಸ್.ಎ.ರವರು ಹಾಗೂ ಮುಖ್ಯ ಶಿಕ್ಷಕಿ ಸೌಮ್ಯ ಶಿಕ್ಷಕರು,ಸಿಬ್ಬಂದಿ ವರ್ಗದವರು,ಮಕ್ಕಳು.

RELATED ARTICLES
- Advertisment -
Google search engine

Most Popular