Friday, April 4, 2025
Google search engine

Homeರಾಜ್ಯಸುದ್ದಿಜಾಲಹುಲಿ ಕಾರ್ಯಚರಣೆಗೆ ಬಂದ ಆನೆಗಳು

ಹುಲಿ ಕಾರ್ಯಚರಣೆಗೆ ಬಂದ ಆನೆಗಳು

ಮೈಸೂರು: ಪ್ರಾಣಿಗಳು ಕಾಡಿನಿಂದ ನಾಡಿನೊಳಗೆ ಬರುತ್ತಿವೆ. ಅದರಲ್ಲೂ ಮೈಸೂರು ಭಾಗದಲ್ಲಿ ಚಿರತೆ, ಆನೆ, ಹುಲಿಗಳ ಕಾಟ ಮಿತಿ ಮೀರಿದ್ದು, ಹಲವು ಜನರು ಹಾಗೂ ಹಸು, ಮೇಕೆಗಳನ್ನು ಬಲಿ ಪಡೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಜನರು ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಅದರಂತೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಮೊನ್ನೇ ಅಷ್ಟೇ ವ್ಯಕ್ತಿಯೋರ್ವನನ್ನು ಹುಲಿ ಬಲಿ ಪಡೆದುಕೊಂಡಿತ್ತು. ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಚರಣೆ ನಡೆಸಿದ್ದು, ಈಗ ಹುಲಿಯ ಪತ್ತೆಗೆ ಆನೆಗಳನ್ನು ಕರೆತರಲಾಗಿದೆ.

ಕಾರ್ಯಚರಣೆ ಸಂದರ್ಭದಲ್ಲೇ ಹುಲಿ ಮೇಕೆಯನ್ನ ಹೊತ್ತೊಯ್ದಿತ್ತು.ಇದರೊಂದಿಗೆ ಹುಲಿ ಪದೇ ಪದೇ ಆತಂಕ ಸೃಷ್ಟಿಸಿದೆ. ಅಲ್ಲದೇ ಸ್ಥಳೀಯ ಜನರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಇದರಿಂದ ಅರಣ್ಯ ಇಲಾಖೆ, ವ್ಯಾಘ್ರನ ಬಂಧನಕ್ಕೆ ಬಂಡೀಪುರ, ರಾಂಪುರ ಆನೆ ಕ್ಯಾಂಪ್‌ನಿಂದ ಆನೆಗಳನ್ನು ಕರೆತಂದಿದೆ.

ಕೇವಲ ನಂಜನಗೂಡು ಭಾಗದ ಕಥೆಯಲ್ಲ. ಹೆಚ್ ಡಿ ಕೋಟೆ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ಹಲವು ಭಾಗಗಳಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಕೇವಲ ಹುಲಿ ಮಾತ್ರವಲ್ಲ ಚಿರತೆ ಆನೆಗಳು ನಾಡಿಗೆ ಬರುವುದು ಹೆಚ್ಚಾಗುತ್ತಿದೆ. ಒಂದು ಕಡೆ ಬೆಳೆ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾದರೆ ಮತ್ತೊಂದು ಕಡೆ ಜೀವವೇ ಹೋಗುವ ಭಯ ಕಾಡಂಚಿನ ಗ್ರಾಮದ ಜನರನ್ನು ಕಾಡುತ್ತಿದೆ.

RELATED ARTICLES
- Advertisment -
Google search engine

Most Popular