ಮಂಡ್ಯ: ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣ ತನಿಖೆ ಪಾರದರ್ಶಕವಾಗಿ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಮಂಡ್ಯದಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.
ಹಾಡ್ಯ ಹುಳ್ಳೆನಹಳ್ಳಿಯ ಆಲೆಮನೆಯೊಂದರಲ್ಲಿ ದಂಧೆ ನಡೆದಿರುವುದು. ಆರೋಗ್ಯ ಇಲಾಖೆಯ ವೈಫಲ್ಯತೆ, ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಮಾಡುವುದು ಕಾನೂನು ಬಾಹಿರ. ಗ್ರಾಮೀಣ ಪ್ರದೇಶದ ಆಲೆಮನೆ ಮತ್ತು ಪರವಾನಿಗೆ ರಹಿತ ಆಸ್ಪತ್ರೆಯಲ್ಲಿ ಅಕ್ರಮ ದಂಧೆ ನಡೆದಿದೆ. ಇದರಲ್ಲಿ ಅಧಿಕಾರಿಗಳು ಸೇರಿ ಹಲವರ ಕೈವಾಡ ಇದ್ದೇ ಇರುತ್ತದೆ. ಕರಾಳ ದಂಧೆಯ ಮುಖವಾಡವನ್ನ ಮಾಧ್ಯಮಗಳು ಬಯಲು ಮಾಡಿದೆ. ದಂಧೆಯ ಕರಾಳ ಮುಖ ಹೊರ ಬೀಳುತ್ತಿದ್ದಂತೆ. ವೈದ್ಯರು ಮತ್ತು ಅಧಿಕಾರಿಯ ಆತ್ಮಹತ್ಯೆ ಪ್ರಕರಣಗಳು ನಡೆದಿರುವುದು ಇದರ ಕ್ರೂರತೆಯನ್ನು ತೋರಿಸಿದೆ. ಬಹಳ ದೊಡ್ಡ ಮಟ್ಟದ ಜಾಲ ಇದರಲ್ಲಿ ಭಾಗಿಯಾಗಿದೆ. ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ.
ಪ್ರಕರಣ ಕುರಿತು ಸಿಓಡಿ ತನಿಖೆ ನಡೆಯುತ್ತಿದ್ದು. ಪ್ರಕರಣ ಸಂಬಂಧ ತನಿಖೆ ಪಾರದರ್ಶಕ ವಾಗಿ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಯಾರದೋ ಪ್ರಭಾವಕ್ಕೆ ಒಳಗಾಗಿ ತನಿಖೆ ನಿಷ್ಕ್ರಿಯಗೊಳ್ಳಬಾರದು. ಕರಾಳ ದಂಧೆ ಕೋರರಿಗೆ ಶಿಕ್ಷೆ ಶಿಕ್ಷೆಯಾಗಲಿ ಆ ಮಟ್ಟಕ್ಕೆ ತನಿಖೆ ಉಪಯುಕ್ತತೆಯಿಂದ ನಡೆಯಲಿ. ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ವಿರುದ್ಧ ಜನಜಾಗೃತಿ ಮೂಡಿಸುವ ಕೆಲವಾಗಲಿ. ಜಿಲ್ಲಾಡಳಿತ ಜಾಗೃತ ದಳ ರಚಿಸಿರುವುದು ಒಳ್ಳೆಯ ಬೆಳವಣಿಗೆ. ಸಾರ್ವಜನಿಕರು ಸಹ ಎಚ್ಚೆತ್ತುಕೊಳ್ಳಬೇಕು.
ಅದೇ ರೀತಿ ಭ್ರೂಣ ಹತ್ಯೆ ತಡೆಗೆ ಎಲ್ಲರು ಸಹಕರಿಸಬೇಕು. ಭಾರತ ದೇಶದಲ್ಲಿ ಹೆಣ್ಣನ್ನು ಗೌರವಿಸುವ, ಪೂಜಿಸುವ ಸಂಸ್ಕೃತಿ ಹೊಂದಿದೆ.
ಪುರುಷ ಪ್ರಧಾನ ವ್ಯವಸ್ಥೆ ಇದ್ದರೂ ಸಹ ಹೆಣ್ಣು ಮಕ್ಕಳು ಸರಿ ಸಮಾನಾಗಿ ದುಡಿಯುವ ಪ್ರಬುದ್ಧತೆ ಇದ್ದಾರೆ. ನಾಲ್ಕು ದಶಕಗಳ ಹಿಂದೆ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಸೇರಿ ಹಲವೆಡೆ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿತ್ತು. ಗಂಡು ಮಕ್ಕಳು ಬೇಕು ಎಂಬ ಕೂಗು ಸಾಮಾಜಿಕವಾಗಿ ವ್ಯಾಪಕವಾಗಿತ್ತು. ಕ್ರಮೇಣ ಕೂಗು ಕಡಿಮೆಯಾಗಿ ಭ್ರೂಣ ಹತ್ಯೆ ಕಡಿಮೆಯಾಗಿತ್ತು. ಮಂಡ್ಯ ಮೈಸೂರು ಪ್ರಾಂತ್ಯದಲ್ಲಿ ಹೆಣ್ಣು ಮಕ್ಕಳ ಸಾಗಾಣಿಕೆಯು ಹೆಚ್ಚಾಗಿತ್ತು ಎಂದು ಹೇಳಿದರು. ವೇಳೆ ಇಷ್ಟೊಂದು ಪ್ರಮಾಣದಲ್ಲಿ ದೊಡ್ಡಜಾಲ ವ್ಯವಸ್ಥಿತವಾಗಿ ಕರಾಳ ದಂಧೆ ನಡೆಸಿರುವುದು ಪತ್ತೆಯಾಗಿದೆ. ದಂಧೆಕೋರರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.