ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರೋಗಿಗಳ ಆರೋಗ್ಯ ರಕ್ಷಣೆಗಾಗಿ ಸದಾ ದುಡಿಯುವ ಪ್ರತಿಯೊಬ್ಬ ವೈದ್ಯನ ಹೆಸರು ಮತ್ತು ಅವರ
ಸೇವೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಕೆ.ಆರ್.ನಗರ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೊಸಕೋಟೆ ಅಶೋಕ್ ನಾಮದಾರಿ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಆಯುಷ್ಮಾನ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿ ವರ್ಗಾವಣೆಗೊಂಡ ಡಾ.ನಟರಾಜು ಅವರಿಗೆ ಬಿಳ್ಕೋಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ಒಂದು ಎರಡು ವರ್ಷ ಕೆಲಸ ಮಾಡುವುದೆ ಹೆಚ್ಚು ಈ ಅಪವಾದವನ್ನು ದೂರಮಾಡಿ ಸುದಿರ್ಘವಾಗಿ 11ವರ್ಷಗಳ ಕಾಲ ಇಲ್ಲಿ ಕೆಲಸ ನಿರ್ವಹಿಸುವಾಗ ರೋಗಿಗಳ ಅರೋಗ್ಯಕ್ಕೆ ಸದಾ ಸ್ವಂದನೆ ಮಾಡಿ ಸಲ್ಲಿಸಿದ ವೈದ್ಯ ಸೇವೆ ಸ್ಮರಣಿಯವಾಗಿದ್ದು ಮುಂದಿನ ವೈದ್ಯ ಜೀವನ ಯಶಸ್ವಿಯಾಗಿ ಸಾಗಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ನಟರಾಜು ಅವರು ಕಳೆದ 11 ವರ್ಷಗಳಿಂದ ಈ ಗ್ರಾಮದಲ್ಲಿ ಆರೋಗ್ಯಧಿಕಾರಿಯಾಗಿ ಕೆಲಸ ನಿರ್ವಹಿಸಿಸಲು ಸಹಕಾರ ನೀಡಿದ ಇಲ್ಲಿನ ಜನತೆಗೆ ಕೃತಜ್ಞತೆ ಸಲ್ಲಿಸುವುದರ ಜತಗೆ ಇಲ್ಲಿ ವೈದ್ಯ ವೃತ್ತಿಯನ್ನ ರೋಗಿಗಳಿಗೆ ಸ್ಪಂದಿಸಿ ಕೆಲಸ ಮಾಡಿದ ತೃಪ್ತಿ ನನಗೆ ಇದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ವೈದ್ಯ ಶ್ರೀಕಂಠಪ್ರಸಾದ್, ಹೊಸಕೋಟೆ ಗ್ರಾ.ಪಂ ಮಾಜಿ ಅಧ್ಯಕ್ಷ ಎಚ್.ಬಿ.ಸಚಿನ್, ಡೈರಿ ಅಧ್ಯಕ್ಷ ಪಾಂಡು, ನಿರ್ದೇಶಕ ಶಿವಕುಮಾರ್, ನ್ಯಾಯಬೆಲೆ ಅಂಗಡಿ ಶಿವಕುಮಾರ್, ಹರವೆ ಗ್ರಾ.ಪಂ.ಮಾಜಿ ಸದಸ್ಯ ಜಯಣ್ಣ, ಕಪ್ಪಡಿ ಯಜಮಾನ್ ಅಪ್ಪಾಜಿಗೌಡ, ಮುಖಂಡ ಸಿದ್ದೇಶ್, ನರ್ಸ್ಗಳಾದ ಸುಮ, ಸಮುದಾಯ ಅರೋಗ್ಯಾಧಿಕಾರಿ ರಕ್ಷಿತಾ, ಪ್ರಯೋಗಶಾಲತಂತ್ರಜ್ಞರಾದ ನಯನ, ಆಶಾ ಕಾರ್ಯಕರ್ತೆಯರಾದ ಶೈಲಜ, ನಾಗರತ್ನ,ಪಾರ್ವತಿ,ಮಂಗಳಮ್ಮ,ಮಂಜುಳಾ, ಮಹದೇವಮ್ಮ,ಮಮತಾ ಸೇರಿದಂತೆ ಮತ್ತಿತರರು ಹಾಜರಿದ್ದರು.



