Saturday, April 19, 2025
Google search engine

Homeಸ್ಥಳೀಯಶಿಕ್ಷಣದೊಂದಿಗೆ ಆರ್ಥಿಕ ಸ್ವಾವಲಂಬನೆಗೆ ಒತ್ತು

ಶಿಕ್ಷಣದೊಂದಿಗೆ ಆರ್ಥಿಕ ಸ್ವಾವಲಂಬನೆಗೆ ಒತ್ತು


ಮೈಸೂರು: ಮಹಾಜನ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣದ ಜತೆಗೆ ಆರ್ಥಿಕ ಸ್ವಾವಲಂಬನೆಗೂ ಇಂತಹ ಉದ್ಯೋಗ ಮೇಳ ಆಯೋಜಿಸಿರುವುದು ಅದರ ಸಾಮಾಜಿಕ ಬದ್ಧತೆ ಹಾಗೂ ಸಾಂಸ್ಕೃತಿಕ ನಾಯಕತ್ವವ ಪ್ರತಿಧ್ವನಿಸುತ್ತದೆ ಎಂದು ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್ ತಿಳಿಸಿದರು.
ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ಮಹಾಮ್ ೨೦೨೩ ಫೆಸ್ಟ್ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕೆರಿಯರ್ ಎಕ್ಸ್‌ಪೋ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಶೇ.೯೫ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಇದುವರೆಗೆ ಇದರ ಉಪಯೋಗ ಪಡೆದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿರುವುದು ಹೆಮ್ಮೆಯ ಸಂಗತಿ. ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು. ಅಧ್ಯಾಪಕರುಗಳ ಕೌಶಲ್ಯವನ್ನು ಹೆಚ್ಚಿಸುವಂತಹ ಹಲವು ಅಧ್ಯಾಪಕ ಕೌಶಲಾಭಿವೃದ್ದಿ ತರಬೇತಿಯನ್ನು ಆಗಾಗ ಮಹಾಜನ ವಿದ್ಯಾಸಂಸ್ಥೆ ಹಮ್ಮಿಕೊಂಡು ನುರಿತ ಅಧ್ಯಾಪಕ ಬಳಗವನ್ನು ಹೊಂದಿದೆ ಎಂದರು.
ಸ್ವಾಯತ್ತತೆಯ ಬಗ್ಗೆ ಯುವಜನತೆಗೆ ತಪ್ಪು ಗ್ರಹಿಕೆ ಇದೆ. ಆದರೆ ಸ್ವಾಯತ್ತ ಕಾಲೇಜಿಗೆ ಪಠ್ಯ ಸುಧಾರಣಾ ಸ್ವಾತಂತ್ರ್ಯದ ಜತೆಗೆ ಹಲವು ಪ್ರಯೋಜನಗಳಿವೆ. ಶೇ.೭೫ ಹಾಜರಾತಿ ಕಡ್ಡಾಯವಿರುವುದು ಸಹ ಶಿಸ್ತಿನ ಸಂಕೇತ. ಮಹಾಜನ ವಿದ್ಯಾರ್ಥಿಗಳು ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್, ವಿದ್ಯಾರ್ಥಿ ಸಂಸತ್, ವಿದ್ಯಾರ್ಥಿ ಸ್ವಯಂಸೇವಕರು ಹಾಗೂ ಪ್ರತಿಭಾ ವೇದಿಕೆ ಮುಂತಾದ ಹಲವು ಸಾಂಸ್ಕೃತಿಕ ನಾಯಕತ್ವವನ್ನು ಪ್ರತಿನಿಧಿಸುವ ವಿದ್ಯಾರ್ಥಿ ಪರ ಚಟುವಟಿಕೆಗಳಿಗೆ ಅಧ್ಯಾಪಕರ ಮಾರ್ಗದರ್ಶನದಲ್ಲಿ ಮಹಾಮ್-೨೦೨೩ ಫೆಸ್ಟ್‌ನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಿರುವುದು ಮಹಾಜನ ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ನಾಯಕತ್ವದ ಗುಣವನ್ನು ಪ್ರತಿಧ್ವನಿಸುತ್ತದೆ. ಆಗಮಿಸಿರುವ ಬಹುತೇಕ ಅಭ್ಯರ್ಥಿಗಳು ನಾಯಕತ್ವದ ಗುಣವನ್ನೇ ಹೊಂದಿದ್ದಾರೆ. ಮಹಾಜನ ಕಾಲೇಜು ಶಿಕ್ಷಣ ಪಡೆದ ಪ್ರತಿಯೊಬ್ಬರಿಗೂ ಉದ್ಯೋಗದ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇಂತಹ ಉದ್ಯೋಗ ಮೇಳ ಹೆಚ್ಚು ಪ್ರಯೋಜನಕಾರಿ. ಯುವಜನತೆ ಹೊಸ ತಂತ್ರಜ್ಞಾನವನ್ನು ಅರಿತು ಸಮಾಜದ ಏಳಿಗೆಗೆ ಪರಿಶ್ರಮದಿಂದ ದುಡಿಯಬೇಕು. ಈವರೆಗೂ ೬೦೦ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ೪೫೦ಕ್ಕೂ ಹೆಚ್ಚು ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿರುವುದು ಸಂತಸದ ಸಂಗತಿ ಎಂದರು.
ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿದರು.
ಮಹಾಜನ ವಿದ್ಯಾಸಂಸ್ಥೆಯ ಗೌ.ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಪ್ರಾಂಶುಪಾಲ ಡಾ.ಬಿ.ಆರ್.ಜಯಕುಮಾರಿ, ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್, ರಮೇಶ್, ಮಹಾಜನ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಪ್ರೊ.ಹರೀಶ್ ಮಾಚಯ್ಯ ಕೋದಂಡೇರ, ಶೈಕ್ಷಣಿಕ ಡೀನ್ ಡಾ.ಶ್ರೀಧರ.ಹೆಚ್, ಮಹಾಮ್ ೨೦೨೩ರ ಅಧ್ಯಾಪಕ ಸಂಯೋಜಕ ಡಾ.ಎಚ್.ಆರ್.ತಿಮ್ಮೇಗೌಡ ಹಾಗೂ ಕೆರಿಯರ್ ಗೈಡನ್ಸ್ & ಪ್ಲೇಸ್‌ಮೆಂಟ್ ಸೆಲ್‌ನ ಸಂಚಾಲಕಿ ಸೌಮ್ಯ ಹೆಚ್.ಎಲ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular