ಪಿರಿಯಾಪಟ್ಟಣ: ಜೋಗನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘ 2022 – 23 ರ ಅವಧಿಯಲ್ಲಿ ನಿವ್ವಳ 1.53 ಲಕ್ಷ ಲಾಭಗಳಿಸಿದೆ ಎಂದು ಆಡಳಿತಾಧಿಕಾರಿ ಬಿ.ಕೆ ಶ್ರೀಕಾಂತ್ ತಿಳಿಸಿದರು.
ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಶೇರುದಾರ ಸದಸ್ಯರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಉತ್ತಮ ದರ ಪಡೆದು ಅಭಿವೃದ್ಧಿಗೆ ಒತ್ತು ನೀಡಬೇಕು ಹಾಗೂ ಸಂಘದ ವತಿಯಿಂದ ಸರ್ಕಾರದಿಂದ ಸಬ್ಸಿಡಿಯಲ್ಲಿ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ದೇವರಾಜು ಅವರು ಮಾತನಾಡಿ ಗ್ರಾಮಸ್ಥರು ಕೃಷಿಯ ಜೊತೆ ಹೈನುಗಾರಿಕೆಯನ್ನು ಅವಲಂಬಿಸಿ ಆರ್ಥಿಕವಾಗಿ ಸದೃಢರಾಗುವಂತೆ ಕೋರಿದರು.

ಈ ವೇಳೆ ಸಂಘದಲ್ಲಿ ಸದಸ್ಯತ್ವ ಪಡೆಯಲು ಶೇರು ಹಣ ಪಾವತಿಸುವ ಮಾಹಿತಿ ಸೇರಿದಂತೆ ಸಹಕಾರ ಸಂಘದಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಷೇರುದಾರರು ಮತ್ತು ಸಾರ್ವಜನಿಕರಿಗೆ ಕಾರ್ಯದರ್ಶಿ ಅವರು ಸಮರ್ಪಕವಾಗಿ ಮಾಹಿತಿ ದೊರಕಿಸಿಕೊಡುವಂತೆ ಸಭೆಯಲ್ಲಿ ಹಾಜರಿದ್ದ ಪ್ರಮುಖರು ಒತ್ತಾಯಿಸಿದರು.
ಈ ಸಂದರ್ಭ ಯಜಮಾನರಾದ ವೆಂಕಟೇಶ್, ಸಂಘದ ಮಾಜಿ ಅಧ್ಯಕ್ಷರಾದ ಪ್ರಕಾಶ್, ಮುಖಂಡರಾದ ರಾಜಣ್ಣ, ನಾಗರಾಜು, ಲೋಕೇಶ್, ಮಹೇಶ್, ರತ್ನಮ್ಮ, ಸಿದ್ದಪ್ಪಾಜಿ, ನಾಗಯ್ಯ, ಚನ್ನಯ್ಯ, ಕುಮಾರ್, ಸ್ವಾಮಿ ಸಂಘದ ಕಾರ್ಯದರ್ಶಿ ಗುರು ಮತ್ತು ಸದಸ್ಯರು ಇದ್ದರು.