Sunday, April 20, 2025
Google search engine

Homeರಾಜ್ಯನೆಮ್ಮದಿಯಿಂದ ಇರಲು ಪ್ರೀತಿ ಬಾಂದವ್ಯಗಳಿ ಹೆಚ್ಚು ಒತ್ತು ನೀಡಿ: ಶ್ರೀ ನಟರಾಜ ಸ್ವಾಮಿ

ನೆಮ್ಮದಿಯಿಂದ ಇರಲು ಪ್ರೀತಿ ಬಾಂದವ್ಯಗಳಿ ಹೆಚ್ಚು ಒತ್ತು ನೀಡಿ: ಶ್ರೀ ನಟರಾಜ ಸ್ವಾಮಿ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ:  ಮನುಷ್ಯನಿಗೆ ಆಸೆ ಇರಬೇಕು ಆದರೆ ದುರಾಸೆಗಳು ಇರಬಾರದು, ದುರಾಸೆಗಳು ಇದ್ದವನಿಗೆ ನಿಮ್ಮದಿ ಇರಲ್ಲ. ಆದರೆ ಇರುವಷ್ಟು  ದಿನ ನೆಮ್ಮದಿಯಿಂದ ಇರಲು ಪ್ರೀತಿ ಬಾಂದವ್ಯಗಳಿ ಹೆಚ್ಚು ಒತ್ತು ನೀಡಬೇಕು ಎಂದು ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮಿಗಳು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ ಪಟ್ಟಣದ ಹುಣಸೂರು ರಸ್ತೆಯ ಪಕ್ಕದಲ್ಲಿರುವ 2ನೇ ಹಂತದ ಬಡಾವಣೆಯ ಸಾರಿಗೆ ನೌಕರರಿಗೆ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಪರಸ್ಪರ ಭಿನ್ನ ಭೇದ ಬೇಡ ನಾವೆಲ್ಲ ಒಂದೆ ಎಂಬ ಮನಸ್ಥಿತಿ ಬಂದರೆ ಇಂತಹ ಸಹಕಾರ ಸಂಘಗಳು ಅಭಿವೃದ್ದಿ ಹೋದಲು ಸಾಧ್ಯವಾಗುತ್ತದೆ ಎಂದು ನುಡಿದರು.

ಭೂ ಪರಿವರ್ತನೆ ಅದು ದೊಡ್ಡ ವ್ಯವಹಾರ ಭೂಮಿ ಪರಿವರ್ತನೆಕ್ಕಿಂತ ನಿಮ್ಮಗಳ ಮನ ಪರಿವರ್ತನೆ ಮಾಡಿರುವಂತಹದು ಅದೇ ಸಹಕಾರ ಸಂಘದ ಉದ್ದೇಶ ಆ ಸಹಕಾರ ಸಂಘ ಸಕ್ರಿಯವಾಗಿ ಕೆಲಸ ನಿರ್ವಾಹಣೆ ಅಧ್ಯಕ್ಷರಿಂದ ಮಾಡುವಂತಹ ಕಾರ್ಯವಲ್ಲ ಎಲ್ಲರ ಸಹಕಾರದಿಂದ ಮಾಡುವಂತಹ ಕೆಲಸ ಹಾಗಾಗಿ ಪ್ರತಿಯೊಬ್ಬರಲ್ಲಿ ಅಭಿನಭಾವ ಸಂಬಂದಗಳು ಬೆಳದರೆ ಸಹಕಾರ ಸಂಘಗಳು ಅಭಿವೃದ್ದಿಯತ್ತ ಸಾಗುತ್ತದೆ ಎಂದರು.

ಬುಹುತೇಕ ಸಂಘ ಸಂಸ್ಥೆಗಳ ಸದಸ್ಯರಲ್ಲಿ ಹೊಂದಾಣಿಕೆ ಇಲ್ಲದೆ ಅಭಿವೃದ್ದಿ ಕಾಣದಂತಗುತ್ತದೆ ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಪರಸ್ಪರ ಹೊಂದಾಣಿಕೆಯಿಂದ ಸದಸ್ಯರು ಇರುವುದರಿಂದಲೇ ಮೊದಲ ನೇ ಹಂತದಲ್ಲಿ ಯಶಸ್ಸು ಕಂಡು ಎರಡನೇ ಹಂತದ ಯಶಸ್ಸಿಗೆ ಕಾಲಿಟ್ಟಿದೆ ಇದೆ ರೀತಿ ಸಾದನೆಯತ್ತ ಸಾಗಲಿ ಎಂದು ಹಾರೈಸಿದರು.

ನಂತರ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಹೆಚ್.ಸ್ವಾಮಿ ಪ್ರತಿಯೊಬ್ಬ ಆಸೆ ಅಭಿಲಷೆಗಳು ಇದ್ದೆ ಇರುತ್ತೆ ನಿವೇಷ ಕೊಂಡು ಮನೆ ನಿರ್ಮಿಸಬೇಕು ಹಾಗೂ ನೆಮ್ಮದಿಯ ಜೀವನವನ್ನ ರೂಪಿಸಿಕೊಳ್ಳಬೇಕು ಅದು ನಿಜವಾದ ಮಾತು ನನ್ನ ಅನುಭವದಲ್ಲಿ ಸಹ ಆದೆ ರೀತಿಯಲ್ಲಿ ಪಾಲಿಸಿದ್ದೇನೆ ನಿಮ್ಮೆರ ಸಹಕಾರದಿಂದ 2ನೇ ಹಂತದ ಬಡಾವಣೆಯನ್ನು ಸುಲಾಲಿತವಾಗಿ ಅಭಿವೃದ್ದಿ ಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ವಿಭಾಗ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಆಶೋಕ್ ಕುಮಾರ್, ಘಟಕ ವ್ಯವಸ್ಥಾಪಕ ಮಹೇಶ್, ಕೆಲ್ಲೂರು ನಾಗರಾಜು, ಮುಖ್ಯ ಶಿಕ್ಷಕ ಹೆಚ್.ಎಸ್.ಪುಟ್ಟರಾಜು, ಸಂಘದ ಅಧ್ಯಕ್ಷ ಕೆ.ಹೆಚ್.ಸ್ವಾಮಿ, ಉಪಾಧ್ಯಕ್ಷ ಅಣ್ಣೇಗೌಡ, ನಿರ್ದೇಶಕರುಗಳಾದ ಜಿ.ಎನ್.ಲೋಕೇಶ್, ಕಲ್ಲೇಶ್, ಎಂ.ಎನ್.ಮಧುರ, ಎ.ಎನ್.ಅರುಣ, ಪಿ.ಎ.ಪುಟ್ಟರಾಜು, ಚಿದನಂದ, ಪ್ರಸನ್ನ ಕುಮಾರ್, ರಾಜಶೇಖರಮೂರ್ತಿ, ವಿವಿದ್ದೋಶ ಸಹಕಾರ ಸಂಘದ ಅಧ್ಯಕ್ಷ ಎಂ.ಸುರೇಶ್, ಕೆ.ಎನ್.ಮೋಹನ್, ಕೆ.ಬಿ.ಮಹದೇವಪ್ಪ ಇದ್ದರು.

RELATED ARTICLES
- Advertisment -
Google search engine

Most Popular