ಪಿರಿಯಾಪಟ್ಟಣ: ಗ್ರಾಮಾಂತರ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಾಗ ರಾಜ್ಯಮಟ್ಟದ ಸಾಧನೆಗೆ ಸಹಕಾರಿಯಾಗಲಿದೆ ಎಂದು ನಕ್ಷತ್ರ ಡ್ಯಾನ್ಸ್ ಸ್ಕೂಲ್ ಸಂಸ್ಥೆ ವ್ಯವಸ್ಥಾಪಕಿ ಭವ್ಯ ಮಂಜುನಾಥ್ ತಿಳಿಸಿದರು.
ವಿಲ್ ಪವರ್ ಆಫ್ ಯೂತ್ ಚಾರಿಟೇಬಲ್ ಟ್ರಸ್ಟ್ ಡಿ.ಜೆ ಡ್ಯಾನ್ಸ್ ಸ್ಟುಡಿಯೋದ 6ನೇ ವಾರ್ಷಿಕೋತ್ಸವ ಅಂಗವಾಗಿ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಸೋಲೊ ಹಾಗೂ ಗ್ರೂಪ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಸೋಲೊ ಜೂನಿಯರ್ ವಿಭಾಗದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಕ್ಷತ್ರ ಡ್ಯಾನ್ಸ್ ಸ್ಕೂಲ್ ವಿದ್ಯಾ ಸಂಸ್ಥೆ ವಿದ್ಯಾರ್ಥಿ ಪೃಥ್ವಿನ್ ಅಭಿನಂದಿಸಿ ಅವರು ಮಾತನಾಡಿದರು.
ಬೆಳೆವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಪೋಷಕರು ತಮ್ಮ ಮಕ್ಕಳ ಪಠ್ಯೇತರ ಚಟುವಟಿಕೆ ಪ್ರತಿಭೆ ಗುರುತಿಸಿ ಸೂಕ್ತ ತರಬೇತಿ ಮೂಲಕ ಪ್ರೋತ್ಸಾಹಿಸಿದಾಗ ಮಾತ್ರ ತಾಲೂಕು ಜಿಲ್ಲೆ ರಾಜ್ಯ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಈ ನಿಟ್ಟಿನಲ್ಲಿ ನಕ್ಷತ್ರ ಡ್ಯಾನ್ಸ್ ಶಾಲೆ ಹಲವು ವರ್ಷಗಳಿಂದ ನುರಿತ ತರಬೇತುದಾರರಿಂದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಸಾಧನೆ ಗುರಿ ತರುಪಲು ಸಹಕರಿಸುತ್ತಿದೆ ಎಂದರು.
ಈ ಸಂದರ್ಭ ನೃತ್ಯ ಸಂಯೋಜಕ ಪ್ರಸನ್ನ, ಚಿತ್ರ ಕಲಾವಿದ ಪವನ್, ಪೋಷಕರಾದ ತುಳಸಿ ಹಾಗೂ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ವಿದ್ಯಾರ್ಥಿ ಸಾಧನೆಗೆ ಅಭಿನಂದನೆ ತಿಳಿಸಿದ್ದಾರೆ.
