ಶ್ರೀರಂಗಪಟ್ಟಣ:ತಾಲೂಕಿನ ಬಾಬುರಾಯನಕೊಪ್ಪಲು ಹಾಗೂ ಮಿಣಜಿ ಬೋರನ ಕೊಪ್ಪಲು ಗ್ರಾಮದ ಸ್ಮಶಾನವನ್ನು ಹೈವೆ ಹೆದ್ದಾರಿಗೆ ಒತ್ತುವರಿ ಮಾಡಿಕೊಂಡಿದ್ದು ಇದೀಗ ಗ್ರಾಮದಲ್ಲಿ ಶವ ಹೊಳಲು ಸಮಸ್ಯೆಯಾಗಿದೆ ಬೇರೆಡೆ ಸ್ಥಳವಕಾಶ ನೀಡಬೇಕು ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ಹಾಗೂ ಗೌರವಾಧ್ಯಕ್ಷ ಬಳ್ಳೇಕೆರೆ ಶ್ರಿಕಾಂತ್ ನೇತೃತ್ವದಲ್ಲಿ ನೂತನ ಶಾಸಕರಿಗೆ ಮಂಗಲ ಗ್ರಾಮದ ಬಳಿ ವೇದಿಕೆ ಕಾರ್ಯಕರ್ತರು ಅಭಿನಂಧಿಸಿ ತಾಲೂಕಿನ ಸಮಸ್ಯೆ ಕುರಿತು ಮಾತನಾಡಿದರು.
ತಾಲೂಕಿನಲ್ಲಿ ಹಲವು ಸಮಸ್ಯೆಗಳಿದ್ದು,ಇದರಲ್ಲಿ ಮೈಸೂರು -ಬೆಂಗಳೂರು ಹೈವೆ ಕಾಮಗಾರಿ ವೇಳೆ ಈ ಮೇಲಿನ ಗ್ರಾಮಗಳ ಸ್ಮಶಾಸನ ಒತ್ತುವರಿಯಾಗಿ ಶವ ಊಳಲು ಜಾಗ ಕಿರಿದಾಗಿದೆ ಇದಲ್ಲದೆ ಎರಡು ಗ್ರಾಮಗಳಿಗೆ ಅಗತ್ಯವಾದ ಸ್ಥಳ ಗುರುತಿಸಿ ಸ್ಮಶಾನ ಜಾಗವನ್ನು ಪ್ರತ್ಯೇಕವಾಗಿ ನೀಡಬೇಕು ,ಇದರ ಜೊತೆಯಲ್ಲಿ ಪಟ್ಟಣದಲ್ಲಿರುವ ಮಿನಿವಿಧಾನ ಸೌಧದ ಕಟ್ಟಡದ ಎರಡನೆ ಮಹಡಿಯಲ್ಲಿರುವ ಉಪ ನೊಂದಾವಣೆ ಕಚೇರಿ ಇರುವುದರಿಂದ ವಯಸ್ಸಾದ ವೃದ್ದರು,ಅಂಗವಿಕಲರು ಮಹಡಿ ಹತ್ತಲು ಆಗದೆ ಹೊತ್ತು ಹೋಗುವ ಪರಿಸ್ಥಿತಿ ಇದೆ.ಇದರ ಬಗ್ಗೆ ತಹಶೀಲ್ದಾರ್ ಅವರಿಗೂ ಹಲವು ಬಾರಿ ದೂರುಗಳ ನೀಡಿದರೂ ಪ್ರಯೋಜನವಾಗಿಲ್ಲ ಕೂಡಲೇ ನೆಲ ಮಹಡಿಯಲ್ಲಿ ಕಚೇರಿ ತೆರೆಯಬೇಕು ಎಂದು ಎರಡು ಮನವಿಗಳನ್ನು ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ವೇದಿಕೆ ಕಾರ್ಯಕರ್ತರು ನೀಡಿದರು.
ಭರವಸೆ:ಬಾಬುರಾಯನ ಕೊಪ್ಪಲು ಹಾಗೂ ಮಿಣಜಿ ಬೋರನ ಕೊಪ್ಪಲು ಗ್ರಾಮದ ಸ್ಮಶಾನವನ್ನು ಪರಿಶೀಲನೆ ಹಾಗೂ ಉಪ ನೊಂದಾವಣೆ ಕಚೇರಿ ಸ್ಥಳಾಂತgದ ಬಗ್ಗೆ ತಹಶೀಲ್ದಾರ್ ಅವರೊಂದಿಗೆ ಚರ್ಚೆ ಮಾಡಿ ನಂತರ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕರು ನೀಡಿದರು.
ಖಜಾಂಚಿ ನಾಗರಾಜು,ಬಿದರಳ್ಳಿ, ಚಿಂದಗಿರಿಕೊಪ್ಪಲು ಜ್ಞಾನೇಶ್, ಬಿ.ಕೆ. ಮಹದೇವಸ್ವಾಮಿ, ವಿಜಯ
ಕುಮಾರ್ ಸೇರಿದಂತೆ ಇತರ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು.