ಮಂಡ್ಯ: ಸಾರ್ವಜನಿಕ ರಸ್ತೆಗೆ ಅಕ್ರಮವಾಗಿ ಸವರ್ಣೀಯರು ಒತ್ತುವರಿ ಮಾಡಿಕೊಂಡು ತಂತಿ ಬೇಲಿ ನಿರ್ಮಿಸಿದ್ದು, ಬೇಲಿ ತೆರವುಗೊಳಿಸುವಂತೆ ಹೂತಗೆರೆ ಗ್ರಾಮಸ್ಥರು ಡಿಸಿಗೆ ಮನವಿ ಸಲ್ಲಿಸಿದ್ದಾರೆ.
ದಲಿತರ ಮೇಲೆ ಗ್ರಾಮದ ರಮೇಶ್ ಎಂಬುವವರಿಂದ ದೌರ್ಜನ್ಯ, ದಬ್ಬಾಳಿಕೆ ಮಾಡಿದ್ದಾರೆಂದು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಹೂತಗೆರೆ ಗ್ರಾಮಸ್ಥರು ಆರೋಪಿಸಿದ್ದಾರೆ.

ಸರ್ವೇ ನಂ.366 ರಲ್ಲಿ ಹಾದು ಹೋಗಿರುವ ದಲಿತರ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಗೆ ತಂತಿ ಬೇಲಿ ಹಾಕಿದ್ದಾರೆ. ಗ್ರಾಮದ ನಕಾಶೆಯಲ್ಲಿ 19.5 ಅಡಿ ರಸ್ತೆ ಇದೆ. ರಸ್ತೆ ಮಧ್ಯೆ ತಂತಿ ಬೇಲಿ ಹಾಕಿಕೊಂಡು ಅಕ್ರಮವಾಗಿ ರಸ್ತೆ ಒತ್ತುವರಿ ಮಾಡಿದ್ದಾರೆ ಎಂದು ಆಪಾದಿಸಿದರು.
ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನ ತೆರವು ಗೊಳಿಸಿ ನ್ಯಾಯ ಕೊಡಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.