Friday, April 18, 2025
Google search engine

Homeರಾಜ್ಯರಾಜ್ಯದ ಎಲ್ಲ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿ: ಶರಣ್‌ ಪಂಪ್‌ವೆಲ್‌

ರಾಜ್ಯದ ಎಲ್ಲ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿ: ಶರಣ್‌ ಪಂಪ್‌ವೆಲ್‌

ಮಂಗಳೂರು: ಶೃಂಗೇರಿ ದೇವಸ್ಥಾನದಂತೆ ರಾಜ್ಯದ ಎಲ್ಲ ದೇವಸ್ಥಾನಗಳಲ್ಲೂ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ವಿಶ್ವ ಹಿಂದೂ ಪರಿಷದ್ ನ ಸಹ ಕಾರ್ಯದರ್ಶಿ ಶರಣ್ ಕುಮಾರ್ ಪಂಪ್‌ವೆಲ್‌ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ ಅವರು, ಇತ್ತೀಚಿಗೆ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರ ಶೃಂಗೇರಿ ಶ್ರೀ ಶಂಕರ ಮಠದವರು ವಸ್ತ್ರ ಸಂಹಿತೆ ಯನ್ನು ಜಾರಿ ಮಾಡ್ದಿದ್ದು ಕ್ಷೇತ್ರಕ್ಕೆ ಬರುವವರು ಹಿಂದೂ ಸಂಪ್ರದಾಯದಂತೆ ಉಡುಗೆ ತೊಡುಗೆ ಧರಿಸಿ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವರ ನಿರ್ಧಾರವನ್ನು ವಿಶ್ವ ಹಿಂದೂ ಪರಿಷದ್ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ಅದೇ ರೀತಿ ಶೃಂಗೇರಿ ಮಠದಲ್ಲಿ ಜಾರಿಗೆಗೊಳಿಸಿದ ವಸ್ತ್ರ ಸಂಹಿತೆಯ ಮಾದರಿಯನ್ನು ಮುಂಬರುವ ದಿನಗಳಲ್ಲಿ ಕರ್ನಾಟಕದ ಎಲ್ಲಾ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಒಳಪಟ್ಟ ಎಲ್ಲ ದೇವಸ್ಥಾನಗಳಲ್ಲಿ ಆಗಮಿಸುವ ಭಕ್ತರಿಗೆ ಧಾರ್ಮಿಕ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular