ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಗ್ರಾಮೀಣ ಭಾಗದ ಜನರು ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿಯಾಗಬೇಕು ಎಂದು ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಹೇಳಿದರು.
ಸಾಲಿಗ್ರಾಮ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲ್ ಚಾವಣಿ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು.
ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡುವ ಮೂಲಕ ಸಂಘದ ಬೆಳವಣಿಗೆಗೆ ಶ್ರಮಿಸಬೇಕು. ಮೈಮುಲ್ ನಿಂದ ಮತ್ತು ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸರ್ವ ಸದಸ್ಯರು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಘದ ಅಭಿವೃದ್ಧಿಗೆ ಮೈಮುಲ್ ನಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿಸೋಮಶೇಖರ್, ಮಾರ್ಗ ವಿಸ್ತರಣಾ ಅಧಿಕಾರಿ ನೇಮಿನಾಥ ಮಾಕಾನಿ, ಸಂಘದ ಅಧ್ಯಕ್ಷ ನಟರಾಜ್, ಉಪಾಧ್ಯಕ್ಷ ಜಗದೀಶ್, ನಿರ್ದೇಶಕರುಗಳಾದ ಮಾರುತಿ, ಸಿ.ಕೆ.ನಾಗರಾಜು, ಸಿ.ಬಿ.ಪ್ರೇಮ್ ಕುಮಾರ್, ನಾರಾಯಣಗೌಡ, ರಂಗೇಗೌಡ, ಲೋಕೇಶ್, ಹರೀಶ್, ಜವರಮ್ಮ, ಜ್ಯೋತಿ, ಸಿಇಒ ಧನಂಜಯ, ನಿವೃತ್ತ ಸಿಇಓ ಗೋಪಾಲ್, ಸಿಬ್ಬಂದಿಗಳಾದ ಗೋವಿಂದ, ಯೋಗೇಶ್, ಸಂತೋಷ, ಮುಖಂಡ ವಿಶ್ವನಾಥ್ ಸೇರಿದಂತೆ ಹಲವರು ಇದ್ದರು.