ಕೊಳ್ಳೇಗಾಲ: ತಾಲೂಕು ಬ್ರಾಹ್ಮಣ ಸಂಘ ಮತ್ತು ವಾಗ್ದೇವಿ ವಿಪ್ರ ಮಹಿಳಾ ಸಂಘದ ಆಶ್ರಯದಲ್ಲಿ ಶ್ರೀಪ್ರಸನ್ನ ರಾಮಮಂದಿರದ ಆವರಣದಲ್ಲಿ ಆಚಾರ್ಯತ್ರಯರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮೈಸೂರಿನ ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾದ ಡಾ.ಹೆಚ್ ವಿ ನಾಗರಾಜ ರಾವ್ ರವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಆಚಾರ್ಯತ್ರಯರು ಹಿಮಾಲಯದ ಶಿಖರದಂತೆ. ಭಾರತದ ವೇದಾಂತವನ್ನು ರಕ್ಷಿಸಿ,ಮುಂದಿನ ಪೀಳಿಗೆಗೆ ನೀಡಿದ ಮಹಾನ್ ಚೇತನಗಳು ಎಂದು ಬಣ್ಣಿಸಿದರು. ಪ್ರತಿಯೊಬ್ಬರು ಗ್ರಂಥಗಳನ್ನು ಓದಿ ಅಧ್ಯಯನ ಮಾಡಿ ಜನರಿಗೆ ತಿಳಿಸಬೇಕು. ವೇದಗಳಲ್ಲಿ ಅಪಾರಜ್ಞಾನವಿತ್ತು ಆ ಜ್ಞಾನದ ಚಿಂತನೆಯನ್ನು ಯುವ ಪೀಳಿಗೆಗೆ ನೀಡಿ ಸಂರಕ್ಷಿಸಬೇಕು. ಆಚಾರ್ಯರಾದ ಶ್ರೀ ಶಂಕರಾಚಾರ್ಯರು ರಾಮಾನುಜಾಚಾರ್ಯರು ಮಧ್ವಾಚಾರ್ಯರು ಭಾರತದ ವೇದಾಂತಗಳಿಗೆ ವಿವಿಧ ಅರ್ಥಗಳನ್ನು ನೀಡಿ ಜ್ಞಾನಭಕ್ತಿ ಕರ್ಮ ಸಿದ್ದಾಂತಗಳನ್ನು ಜಗತ್ತಿಗೆ ನೀಡಿ ಮಾನವರನ್ನು ಕಲ್ಯಾಣಗೊಳಿಸಿದವರು ಆಚಾರ್ಯರು ಇಡೀ ವಿಶ್ವಕ್ಕೆ ಜ್ಞಾನ ಸಂಪನ್ನರು. ಬ್ರಾಹ್ಮಣರಾಗಿ ಬ್ರಾಹ್ಮಣ್ಯದ ಮಾರ್ಗದ ಮೂಲಕ ಸನ್ಮಾರ್ಗವನ್ನು ನಡೆಸಿಕೊಂಡು ಸಮಾಜದ ಸರ್ವರನ್ನು ಪ್ರೀತಿಸಿ ಗೌರವಿಸಿ ಮಾರ್ಗದರ್ಶನ ನೀಡುವ ಶಕ್ತಿಯನ್ನು ಬೆಳೆಸಿಕೊಳ್ಳಿ ಎಂದು ತಿಳಿಸಿದರು.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಸನ್ಮಾನಿಸಿ ಗೌರವಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ನಂ ಶ್ರೀಕಂಠ ಕುಮಾರ್ ಮಾತನಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಕರ್ನಾಟಕ ರಾಜ್ಯದ ಸಮಸ್ತ ಬ್ರಾಹ್ಮಣರ ಅಭಿವೃದ್ಧಿಗೆ ಹಲವಾರು ಕಾರ್ಯ ಯೋಜನೆಗಳನ್ನು ವಿದ್ಯಾರ್ಥಿ ನಿಲಯವನ್ನು ಪ್ರೋತ್ಸಾಹ ವೇತನವನ್ನು ನೀಡುತ್ತಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಏಕೆ 50 ವರ್ಷಗಳ ತುಂಬಿದ್ದು ಇದರ ಆಚರಣೆ ಡಿಸೆಂಬರ್ ತಿಂಗಳಲ್ಲಿ ಜರುಗಲಿದೆ. ಸರ್ವರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದು ತಿಳಿಸಿದರು. ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶೇಖರ್ ಶಾಸ್ತ್ರಿ ಮಾತನಾಡಿ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಆಚಾರ್ಯ ಜಯಂತಿ ಹಾಗೂ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದು ಸಂಘಟಿತರಾಗಿ ಪರಸ್ಪರ ಸಹಕಾರ ಭಾವನೆಯಿಂದ ಸರ್ವರು ಸಂಘವನ್ನು ಮುನ್ನಡೆಗೆ ಕೊಂಡೊಯ್ಯುತ್ತಿರುವುದು ಸಂತೋಷವೆಂದು ತಿಳಿಸಿದರು.
ವಾಗ್ದೇವಿ ವಿಪ್ರ ಮಹಿಳಾ ಸಂಘದ ಅಧ್ಯಕ್ಷ ಮಲ್ಲಿಕಾ ರಾವ್,ಮಂಜುನಾಥ್ ,ನರಸಿಂಹನ್, ವೆಂಕಟೇಶ್ ,ಕುಮಾರ್ ಮುಂತಾದವರು ಉಪಸ್ಥಿತರಿದ್ದರು.