ಬಳ್ಳಾರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ, ಪ್ರೌಢಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ ಅಡಿಬಾಪೂಜಿ ನಗರದ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಭರತ್ ರೆಡ್ಡಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕರು ಜಿಲ್ಲೆಯಲ್ಲಿ, ಬೃಹತ್ ಕಾರ್ಖಾನೆಗಳು ಉದ್ಯಮಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು. ಸಿಎಸ್‌ಆರ್ ಅಡಿ ಬೇರೆ ಕಾರ್ಯಗಳಿಗೆ ಬಳಸಲಾಗುತ್ತಿದೆ. ರಾಜ್ಯದ ಸಿಎಂ ಮತ್ತು ಡಿಸಿಎಂ ಅವರುಗಳ ನೇತೃತ್ವದಲ್ಲಿ ಉದ್ಯಮಿಗಳೊಂದಿಗೆ ಸಭೆ ನಡೆಸಿ ನಮ್ಮ ಜಿಲ್ಲೆಯಲ್ಲು ಉದ್ಯಮಿಗಳು ಬಡ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಾಲಾ ಅಭಿವೃದ್ದಿಗೆ ಮುಂದಾಗುವಂತೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.
ಇನ್ನು ಮಕ್ಕಳು ವಿದ್ಯಾಭ್ಯಾಸದ ಜೊತೆ ಬೆಳವಣಿಗೆಗೆ ಪೂರಕವಾಗಲಿ ಎನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಯೋಜನೆ ಜಾರಿ ಮಾಡಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಕೆಲ ಹೊತ್ತು ಮಕ್ಕಳ ಜೊತೆ ಕುಳಿತು, ಉತ್ತಮ ಶಿಕ್ಷಣಕ್ಕೆ ಸದೃಡ ದೇಹದ ಬೆಳವಣಿಗೆ ಮುಖ್ಯ, ಮುಂದಿನ ದಿನಗಳಲ್ಲಿ ಈ ಶಾಲೆಯನ್ನ ಮೆಲ್ದೆರ್ಜೆಗೆರಿಸಿ ಪಿಯು ಕಾಲೇಜು ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಪಾಲಿಕೆಯ ಮೇಯರ್ ತ್ರಿವೇಣಿ, ಉಪ ಮೇಯರ್, ಜಾನಕಿ, ವಾರ್ಡ್ ಸದಸ್ಯ ರಾಮಾಂಜಿನೇಯಲು ಮತ್ತು ಮುಖಂಡರಾದ ಚಾನಾಳ್ ಶೇಖರ್, ಕಗ್ಗಲ್ ಮಂಜುನಾಥ್ ಸೇರಿದಂತೆ ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.
