Friday, April 4, 2025
Google search engine

Homeಸ್ಥಳೀಯಸಮರ್ಥನಂ ವಿಶೇಷ ಮಕ್ಕಳಿಂದ ಪರಿಸರ ದಿನಾಚರಣೆ

ಸಮರ್ಥನಂ ವಿಶೇಷ ಮಕ್ಕಳಿಂದ ಪರಿಸರ ದಿನಾಚರಣೆ

ಮೈಸೂರು: ವಿಜಯನಗರದ ೪ನೇ ಹಂತದಲ್ಲಿರುವ ಸಮರ್ಥನಂ ಬುದ್ದಿ ವಿಕಲಚೇತನ ಶಾಲೆಯ ಬುದ್ಧಿ ವಿಶೇಷ ಮಕ್ಕಳಿಂದ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಮಾಡಲಾಯಿತಿ.

ಬುದ್ಧಿ ವಿಶೇಷ ವಿಧ್ಯಾರ್ಥಿಯಾದ ವಿ.ಆರ್ಯನ್ ಗಿಡ ನೆಡಿ, ಗಿಡ ನೆಡಿ, ಮನೆಯ ಮುಂದೊಂದು ಗಿಡ ನೆಡಿ, ಮನೆಯ ಹಿಂದೊಂದು ಗಿಡ ನೆಡಿ, ನೆಟ್ಟ ಗಿಡಕೆ ನೀರು ಹಾಕಿ ಬಾಳುಕೊಡಿ ಎಂಬ ಹಾಡನ್ನು ಹಾಡಿ ಪರಿಸರ ಜಾಗೃತಿ ಮೂಡಿಸಿದರು.

ಇದಕ್ಕೂ ಮೊದಲು ಮಹಾರಾಣಿ ವಿಜ್ಙಾನ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ಗೋವಿಂದ ರಾಜು ಕಾರ್ಯಕ್ರಮಕ್ಕೆ ಚಾಲನೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ವಿಶ್ವ ಪರಿಸರ ದಿನಾಚರಣೆ ಹಸಿರಿನ ಮಹತ್ವವನ್ನು ಜಗತ್ತಿನೆಲ್ಲೆಡೆ ಸಾರುವ ದಿನ. ಆದರೆ ಕಾಡು ಪರಿಸರ ರಕ್ಷಣೆ ಕೇವಲ ಈ ದಿನಕ್ಕೆ ಸೀಮಿತವಾಗಿರಬಾರದು. ಪ್ರತಿದಿನ ನಾವು ಮಾಡುವ ಪ್ರತಿ ಕೆಲಸದಲ್ಲೂ ಪರಿಸರವನ್ನ ಗಮನದಲ್ಲಿಟ್ಟುಕೊಳ್ಳಬೇಕು. ಹೆಚ್ಚು ಮರ – ಗಿಡಗಳನ್ನು ನೆಡುವುದು, ನೀರನ್ನು ಉಳಿಸುವುದು, ಮರುಬಳಕೆ ಮಾಡುವುದು, ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ಉಳಿಸುವುದು ಉತ್ತಮ ಪರಿಸರಕ್ಕೆ ನಾವು ಕೊಡಬಹುದಾದ ಕೊಡಿಗೆ ಎಂದರು.

ಅಲ್ಲದೆ ನಾವುಗಳು ಯಾವಾಗಲೂ ನಮ್ಮ ಚಟುವಟಿಕೆಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಆರೋಗ್ಯಕರವಾಗಿರಲು ಶ್ರಮಿಸಬೇಕು. ನಮ್ಮ ದುರಾಸೆ ಬಿಟ್ಟು, ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು.

ಸದರಿ ಕಾರ್ಯಕ್ರಮದಲ್ಲಿ ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗ ಮುಖ್ಯಸ್ಥ ಶಿವರಾಜು ಕಾರ್ಯಕ್ರಮ ನಿರೂಪಿಸಿದರು,  ಶಾಲೆಯ ಮುಖ್ಯೋಪಾಧ್ಯಾಯರಾದ ಭ್ರಮರಂಭ, ವಿಶೇಷ ಶಿಕ್ಷಕರಾದ ಪದ್ಮ, ವಿದ್ಯಾವತಿ, ಮಾನಸ, ರಾಘವೇಂದ್ರ, ಪವಿತ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular