ಕೃಷ್ಣಮೂರ್ತಿಪುರಂನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗುಬ್ಬಚ್ಚಿ ಶಾಲೆ) ಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ತಳಿಯ ಸಸಿಗಳನ್ನು ಹಾಗೂ ಸಮವಸ್ತ್ರ ವಿತರಿಸಿ ಪರಿಸರ ದಿನಾಚರಣೆ ನಿರಂತರವಾಗಿ ನಡೆಯಲಿ ಎಂದು ಶಾಸಕರಾದ ಟಿಎಸ್ ಶ್ರೀವತ್ಸ ಮಾತನಾಡಿದರು.
ಮೈಸೂರು:ಹವಮಾನ ವೈಪರಿತ್ಯ ಸಮಸ್ಯೆಯನ್ನು ಎದುರಿಸಲು “ಮಗುವಿಗೊಂದು ಮರ ಶಾಲೆಗೊಂದು ವನ ” ಕಾರ್ಯಕ್ರಮ ಕೃಷ್ಣಮೂರ್ತಿಪುರಂನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗುಬ್ಬಚ್ಚಿ ಶಾಲೆ) ಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೆ ವಿ ಆರ್ ಬಿ ಟ್ರಸ್ಟ್ ಹಾಗೂ ಕೆ ಎಂ ಪಿ ಕೆ ಟ್ರಸ್ಟ್ ಮಕ್ಕಳಿಗೆ ವಿವಿಧ ತಳಿಯ ಸಸಿಗಳನ್ನು ಹಾಗೂ ಸಮವಸ್ತ್ರ ವಿತರಿಸಿ ಮಾತನಾಡಿದ ಶಾಸಕರಾದ ಟಿ ಎಸ್ ಶ್ರೀವತ್ಸ ಪರಿಸರ ದಿನಾಚರಣೆ ನಿರಂತರವಾಗಿ ನಡೆಯಲಿ,ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದೆ. ಇದು ಮಾನವನಿಂದಲೇ ಸರಿಯಾಗಬೇಕಿದೆ. ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ ಎದುರಾಗಲಿದೆ. ಸಸಿ ನೆಡುವ ಕಾರ್ಯಕ್ರಮ ಕೇವಲ ಜೂನ್ 5ಕ್ಕೆ ಮಾತ್ರ ಸೀಮಿತವಾಗದೆ ಪರಿಸರದ ಕುರಿತ ಕಾಳಜಿ ನಿರಂತರವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ನಂತರ ಮಾತನಾಡಿದ ಕೆ ವಿ ಆರ್ ಬಿ ಟ್ರಸ್ಟ್ ಅಧ್ಯಕ್ಷ ಕೆ ಆರ್ ಸತ್ಯನಾರಾಯಣ್ ಪ್ರತಿಯೊಬ್ಬರು ಆರೋಗ್ಯ ವಿಮೆ ಮಾಡಿಸಲು ತೋರುವ ಕಾಳಜಿ ನಮ್ಮ ಮನೆಯ ಸುತ್ತಮುತ್ತಲು ಗಿಡ ಮರ ಬೆಳೆಸಲು ತೋರುತ್ತಿಲ್ಲ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ವಾರದಲ್ಲಿ ಒಂದು ದಿನವಾದರೂ ಪರಿಸರ ಕಾಳಜಿಯುಳ್ಳ ಕೆಲಸಗಳಲ್ಲಿ ಯುವ ಸಮೂಹ ಭಾಗವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಸಮವಸ್ತ್ರ ದೇಣಿಗೆ ನೀಡಿದ ಉದ್ಯಮಿ ಕೆ ಆರ್ ಸತ್ಯನಾರಾಯಣರವರಿಗೆ ಶಾಲೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಟಿ ಎಸ್ ಶ್ರೀವತ್ಸ, ಕ್ಷೇತ್ರದ ಶಿಕ್ಷಣಾಧಿಕಾರಿ ಸಿ ಎನ್ ರಾಜು, ಕೆ ವಿ ಆರ್ ಬಿ ಟ್ರಸ್ಟ್ ಅಧ್ಯಕ್ಷ ಕೆ ಆರ್ ಸತ್ಯನಾರಾಯಣ್, ಸಂಪನ್ಮೂಲ ಅಧಿಕಾರಿ ಶ್ರೀಕಂಠ ಸ್ವಾಮಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನಂ.ಶ್ರೀಕಂಠ ಕುಮಾರ್, ಮಾಜಿನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಜಯಸಿಂಹ, ರಂಗನಾಥ್, ಸುಚೇಂದ್ರ, ಚಕ್ರಪಾಣಿ, ಶಾಲೆಯ ಮುಖ್ಯೋಪಾಧ್ಯಾಯರಾದ ಮೋಹನ್ ಕುಮಾರ್, ದೂರ ರಾಜಣ್ಣ, ಹಾಗೂ ಇನ್ನಿತರರು ಭಾಗಿಯಾಗಿದ್ದರು.