Wednesday, August 6, 2025
Google search engine

Homeರಾಜ್ಯಸುದ್ದಿಜಾಲ"ಪರಿಸರ ಸಂರಕ್ಷಣೆ ತುಂಬಾ ಅಗತ್ಯ ಮತ್ತು ಅನಿವಾರ್ಯ ": ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್. ಮಹಾದೇವ...

“ಪರಿಸರ ಸಂರಕ್ಷಣೆ ತುಂಬಾ ಅಗತ್ಯ ಮತ್ತು ಅನಿವಾರ್ಯ “: ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್. ಮಹಾದೇವ ಮೂರ್ತಿ

ಮೈಸೂರು : ಯುವರಾಜ ಕಾಲೇಜಿನ ಕನ್ನಡ ವಿಭಾಗದ ಎನ್ ಎಸ್ ಎಸ್ ಹಾಗೂ ಎನ್ ಸಿ ಸಿ ಸಹಯೋಗದಲ್ಲಿ ಕಾಲೇಜಿನ‌ ಅವರಣದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ಸಂರಕ್ಷಣೆ – ಸ್ವಚ್ಚತಾ ಅಭಿಯಾನ ಕ್ಕೆ ಚಾಲನೆ ನೀಡಲಾಯಿತು. ಕಾಲೇಜಿನ ಪ್ರೊ ಎಸ್.ಮಹದೇವಮೂರ್ತಿ ಅವರು, ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪರಿಸರವನ್ನು ಉಳಿಸಿಕೊಳ್ಳಲು ಸಹಕರಿಸಬೇಕು. ಪ್ಲಾಸ್ಟಿಕ್ ಸೇರಿದಂತೆ ಯಾವುದೇ ವ್ಯರ್ಥ ವಸ್ತು ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಬೀಸಾಡದೆ ಶುಚಿತ್ವ ಕಾಪಾಡಬೇಕು ಎಂದರು.

ಸುಂದರವಾದ ಪರಿಸರವನ್ನು ವಿದ್ಯಾವಂತರಾದ ನಾವುಗಳು ಮಲೀನಗೊಳಿಸಬಾರದು. ಪ್ರಕೃತಿ, ನಿಸರ್ಗ ಸೌಂದರ್ಯ ನಮಗೆ ಸಿಕ್ಕಿರುವ ವರ. ಇದನ್ನು ಸಂರಕ್ಷಿಸಿ ಪಕ್ಷಿ ಸಂಕುಲಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಸಿ. ಡಿ. ಪರಶುರಾಮ, ಪ್ರಾಧ್ಯಾಪಕರಾದ ಪ್ರೊ. ಜಿ. ಶ್ರೀನಿವಾಸ್, ಪ್ರೊ. ಎಂ.ಪಿ. ರೇಖಾ, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಎಸ್. ಸುರೇಶ್, ಎನ್ ಎಸ್ ಎಸ್ ಅಧಿಕಾರಿ ಡಾ. ಗಿರೀಶ್ ಚಂದ್ರ, ಎನ್ ಸಿಸಿ ಅಧಿಕಾರಿ ಡಾ. ಅನಿಲ್ ಕುಮಾರ್ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿ ಕಾಲೇಜು ಆವರಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿದರು.

RELATED ARTICLES
- Advertisment -
Google search engine

Most Popular